ಬಲಿಷ್ಠ ನ್ಯೂಜಿಲ್ಯಾಂಡ್ (Newzealand) ತಂಡವನ್ನು ಮಣಿಸುವ ಮೂಲಕ ಪಾಕಿಸ್ತಾನ (Pakistan) ಐಸಿಸಿ ಟಿ20 ವಿಶ್ವಕಪ್ ಫೈನಲ್ ಗೆ ಪ್ರವೇಶಿಸಿದೆ. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನೀಡಿದ್ದ 153 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಇನ್ನು 5 ಎಸೆತ ಬಾಕಿ ಇರುವಂತೆ 153 ರನ್ ಪೇರಿಸಿ ಗೆಲುವಿನ ನಗೆ ಬೀರಿದೆ.
ಪಾಕಿಸ್ತಾನ ಪರ ಆರಂಭಿಕರಾಗಿ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. ಮೊಹಮ್ಮದ್ ರಿಜ್ವಾನ್ 57 ರನ್ ಬಾರಿಸಿದ್ದರೆ ಬಾಬರ್ ಅಜಮ 53 ರನ್ ಗಳಿಸಿ ಔಟಾದರು. ನಂತರ ಬಂದ ಮೊಹಮ್ಮದ್ ಹ್ಯಾರಿಸ್ 30 ಹಾಗೂ ಶಾನ್ ಮಸೂದ್ ಅಜೇಯ 3 ರನ್ ಬಾರಿಸಿದ್ದಾರೆ. ಇದನ್ನೂ ಓದಿ : – ಸತೀಶ್ ಜಾರಕಿಹೊಳಿ ಮುಸ್ಲಿಂ ತುಷ್ಠಿಕರಣದ ಒಂದು ಭಾಗ – ಆರಗ ಜ್ಞಾನೇಂದ್ರ
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿತ್ತು. ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 4, ಡೆವೊನ್ ಕಾನ್ವೇ 21, ಕೇನ್ ವಿಲಿಯಮ್ಸನ್ 46, ಗ್ಲೆನ್ ಫಿಲಿಪ್ಸ್ 6 ಡೇರಿಲ್ ಮಿಚೆಲ್ ಅಜೇಯ 53 ಜೇಮ್ಸ್ ನೀಶಮ್ ಅಜೇಯ 16 ರನ್ ಪೇರಿಸಿದ್ದಾರೆ. ಪಾಕ್ ಪರ ಶಾಹೀನ್ ಶಾ ಆಫ್ರಿದಿ 2 ಮತ್ತು ಮೊಹಮ್ಮದ್ ನವಾಜ್ 1 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ : – T-20 WORLDCUP- ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ; ನಾಯಕ ರೋಹಿತ್ ಶರ್ಮಾಗೆ ಗಾಯ