ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ( VIRAT KOHLI )ಯ ಕೆಚ್ಚೆದೆಯ ಹೋರಾಟಕ್ಕೆ ಪಾಕಿಸ್ತಾನ ಮಂಡಿಯೂರಿದೆ. ಹೈ ವೋಲ್ಟೆಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 4 ವಿಕೆಟ್ ಗಳ ರೋಚಕ ಜಯದೊಂದಿಗೆ ಭಾರತೀಯರಿಗೆ ದೀಪಾವಳಿ ಉಡುಗೊರೆ ನೀಡಿದೆ.
ಪಾಕಿಸ್ತಾನ ನೀಡಿದ 160 ರನ್ ಗಳ ಉತ್ತಮ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಆಘಾತದ ನಡುವೆಯೇ ಕೊಹ್ಲಿ, ಪಾಂಡ್ಯರ 113 ರನ್ (78 ಎಸೆತ) ಜೊತೆಯಾಟ ಮತ್ತು ಕೊನೆಯ ಎಸೆತದಲ್ಲಿ ಅಶ್ವಿನ್ ಸಿಡಿಸಿದ ಬೌಂಡರಿ ನೆರವಿನಿಂದ ಭಾರತ 4 ವಿಕೆಟ್ ಗಳ ಅಂತರದಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್ ನಲ್ಲಿ ಭಾರತ ಶುಭಾರಂಭ ಕಂಡಿದೆ. ಇದನ್ನೂ ಓದಿ : – ಆನಂದ್ ಚಂದ್ರಶೇಖರ್ ಮಾಮಿನಿ ನಿಧನಕ್ಕೆ ಸಚಿವ ಮುರುಗೇಶ್ ನಿರಾಣಿ ಸಂತಾಪ
ಕೊನೆಯ 12 ಎಸೆತಗಳಲ್ಲಿ ಭಾರತ ( INDIA )ಗೆಲುವಿಗೆ 31 ರನ್ ಬೇಕಾಗಿತ್ತು. 19ನೇ ಓವರ್ ನಲ್ಲಿ ಒಟ್ಟು 16 ರನ್ ಹರಿದು ಬಂತು. ಕೊನೆಯ 6 ಎಸೆತಗಳಲ್ಲಿ ಭಾರತ ಗೆಲುವಿಗೆ 16 ರನ್ ಬೇಕಾಗಿತ್ತು. ಈ ವೇಳೆ ಹಲವು ಹೈಡ್ರಾಮಾಗಳೊಂದಿಗೆ ಬೌಂಡರಿ, ಸಿಕ್ಸ್, ವಿಕೆಟ್ ಗಳ ಪತನದ ನಡುವೆಯೇ ಕೊನೆಯ ಎಸೆತದಲ್ಲಿ ಅಶ್ವಿನ್ ಹೊಡೆದ ಬೌಂಡರಿಯೊಂದಿಗೆ ಭಾರತ 4 ವಿಕೆಟ್ ಗಳ ಜಯ ಸಾಧಿಸಿ ಸಂಭ್ರಮಿಸಿತು.
ಇದನ್ನೂ ಓದಿ : – ತೆನೆ ಹೊರ್ತರಾ KGF ಬಾಬು…? ಕುತೂಹಲ ಕೆರಳಿಸಿದ ಸಿಎಂ ಇಬ್ರಾಹಿಂ ಭೇಟಿ!