ಫಿಫಾ ವಿಶ್ವಕಪ್ ಹಬ್ಬ – ಕತಾರ್ ನಲ್ಲಿ ಪ್ರತಿಧ್ವನಿಸಲಿದೆ ಭಾರತೀಯ ಪ್ರತಿಭೆಯ ಮಧುರ ಧ್ವನಿ

ಫುಟ್​​ ಬಾಲ್‌ ( FOOTBOLL ) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕತಾರ್ ದೇಶ ಫಿಫಾ ವಿಶ್ವಕಪ್ ( FIFA World Cup ) ಆಯೋಜಿಸುತ್ತಿದೆ.

ಫುಟ್​​ ಬಾಲ್‌ ( FOOTBOLL ) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕತಾರ್ ದೇಶ ಫಿಫಾ ವಿಶ್ವಕಪ್ ( FIFA World Cup ) ಆಯೋಜಿಸುತ್ತಿದೆ. ಕ್ರೀಡಾಕೂಟದ ಉದ್ಘಾಟನಾ ಪಂದ್ಯವು ಇಂದು ರಾತ್ರಿ 9:30ಕ್ಕೆ ಪ್ರಾರಂಭವಾಗುತ್ತದೆ. ಮಧ್ಯ ಪ್ರದೇಶದ ಮಂಡ್ಲಾ ಎಂಬಲ್ಲಿನ ನೈನ್‌ಪುರದಂತಹ ಪುಟ್ಟ ಪಟ್ಟಣದಿಂದ ಬಂದಿರುವ ಗಾಯಕಿ ಶೆಫಾಲಿ ಚೌರಾಸಿಯಾ ಕತಾರ್‌ ನಲ್ಲಿ ನಡೆಯಲಿರುವ ಫುಟ್‌ ಬಾಲ್ ಪಂದ್ಯಾವಳಿಯಲ್ಲಿ ಹಾಡುಗಳ ಮೂಲಕ ಮೋಡಿ ಮಾಡಲಿದ್ದಾರೆ.

ಶೆಫಾಲಿ ಕತಾರ್‌ ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ ನಲ್ಲಿ ಕಾರ್ಯಕ್ರಮ ನೀಡಲು ಆಯ್ಕೆಯಾಗಿದ್ದಾರೆ. ಗ್ರಾವಿಟಾಸ್ ಮ್ಯಾನೇಜ್‌ ಮೆಂಟ್ ಎಫ್ ಝಡ್‌ ಇ ಇವರನ್ನು ಯುಎಇಗೆ ಆಹ್ವಾನಿಸಿದೆ. ಅಲ್ಲಿ ಅವರು ಒಟ್ಟು 13 ಪ್ರದರ್ಶನಗಳನ್ನು ನೀಡುವರು.  ಇದನ್ನೂ ಓದಿ :–  ಮಸ್ಕ್ ಸಮೀಕ್ಷೆಯಲ್ಲಿ ಟ್ರಂಪ್ ಪಾಸ್ – ಮತ್ತೆ ಸ್ಥಾಪನೆಯಾಗಲಿದೆ ಟ್ವಿಟರ್ ಖಾತೆ

ಈ ಪ್ರತಿಭೆ ಪಾನ್ ಉದ್ಯಮಿ ಸಂತೋಷ್ ಚೌರಾಸಿಯಾ ಎಂಬವರ ಪುತ್ರಿ, ಬಾಲ್ಯದಿಂದಲೂ ಉನ್ನತ ಸ್ಥಾನಕ್ಕೇರುವ ಮಹದಾಸೆ ಹೊಂದಿದ್ದು ಕಠಿಣ ಪರಿಶ್ರಮ ಹಾಗೂ ಸಂಗೀತಾಭ್ಯಾಸ ಮಾಡುವ ಮೂಲಕ ಸಾಕಾರಗೊಳಿಸಿದ್ದಾರೆ. ವಿಶ್ವಕಪ್‌ ನಲ್ಲಿ ಪಂದ್ಯದ ವೇಳೆ, ಸಾರ್ವಜನಿಕ ಮನರಂಜನೆಗಾಗಿ ಹಾಡಲಿದ್ದು ಪ್ರದರ್ಶನವನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಗುತ್ತದೆ.

 ಇದನ್ನೂ ಓದಿ :–   ಸುಕೃತ ನಾಗ್-ಶೈನ್ ಶೆಟ್ಟಿ ಮದುವೆ ಫಿಕ್ಸ್…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!