ಟೀಮ್ ಇಂಡಿಯಾ ( TEAM INDIA ) ದ ಮಾಜಿ ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ( VERRENDRA SEWAG ) ಅವರ ಹಿರಿಯ ಪುತ್ರ ಆರ್ಯ ವೀರ್ ಕೂಡ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅದು ಕೂಡ ತಂದೆಯಂತೆ ಡ್ಯಾಶಿಂಗ್ ಬ್ಯಾಟ್ಸ್ ಮನ್ ಆಗಿ ಎಂಬುದು ವಿಶೇಷವಾಗಿದೆ.
View this post on Instagram
ವಿಜಯ್ ಮರ್ಚೆಂಟ್ ಟ್ರೋಫಿಗಾಗಿ ದೆಹಲಿ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಂಡರ್ 16 ಕ್ರಿಕೆಟ್ ಟೂರ್ನಿಗೆ ಸೆಹ್ವಾಗ್ ಅವರ ಪುತ್ರ ಎಂಟ್ರಿ ಕೊಟ್ಟಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಆಗಿರುವ ಆರ್ಯ ವೀರ್ ಅವರ ಬ್ಯಾಟಿಂಗ್ ಶೈಲಿ ತಂದೆಯಂತೆ ಇರುವುದು ವಿಶೇಷ. ಇದನ್ನು ಓದಿ : – ಹಾವೇರಿಯಲ್ಲಿ ವಿಜೃಂಭಣೆಯಿಂದ ನಡೆದ ಚೌಡೇಶ್ವರಿ ದೇವಿಯ ಕಾರ್ತಿಕ ಉತ್ಸವ…
View this post on Instagram
ಅದರಲ್ಲೂ ಏರಿಯಲ್ ಶಾಟ್ ಗಳ ಮೂಲಕ ಅಬ್ಬರಿಸುವ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು. ಇದೀಗ ಸ್ಪರ್ಧಾತ್ಮಕ ಕ್ರಿಕೆಟ್ ಮೂಲಕ ತಂದೆಯ ಹಾದಿಯಲ್ಲೇ ಸಾಗಲು ಆರ್ಯ ವೀರ್ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ. 15 ವರ್ಷದ ಆರ್ಯವೀರ್ ಸದ್ಯ ಅಂಡರ್ 16 ವಿಜಯ್ ಮರ್ಚಂಟ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದು, ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿರಲಿಲ್ಲ.
ಇದನ್ನು ಓದಿ : – ಬೆಳಗಾವಿ ಗಡಿ ವಿವಾದವನ್ನ ಎರಡೂ ಸರ್ಕಾರಗಳು ಶೀಘ್ರವೇ ಬಗೆಹರಿಸಬೇಕು – ಸತೀಶ್ ಜಾರಕಿಹೊಳಿ