ಮೀಸಲಾತಿ ಬಗ್ಗೆ ತಮ್ಮ ಅಧಿಕಾರವಧಿಯಲ್ಲಿ ಕೈಕೊಂಡ ತೀರ್ಮಾನಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸ್ಮರಿಸಿದರು. ರಾಜ್ಯ ಸರ್ಕಾರ ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸಿದೆ. ಒಕ್ಕಲಿಗರಿಗೆ ಕೊಟ್ಟಿದ್ದ ಮೀಸಲಾತಿ ಕೋಟಾ ಕಡಿಮೆ ಮಾಡಿ ಮುಸ್ಲಿಂರಿಗೆ ಕೊಟ್ಟಿದ್ದು ನಾನು ಎಂದು ಹೆಚ್ಡಿ ದೇವೇಗೌಡರು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಂವಿದಾನ ಕೊಟ್ಟ ಮೀಸಲಾತಿ ಭರ್ತಿಮಾಡಲು ಆಗದಿದ್ದಾಗ ಉದ್ಯೋದದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದರು. ಶೇಕಡಾ 15 ಎಸ್ಸಿಗಳಿಗೆ, ಶೇಕಡಾ 3 ಎಸ್ಟಿಗಳಿಗೆ ಮೀಸಲಾತಿ ಇತ್ತು. ಆದರೆ ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೆ ಹೋದಾಗ ನಾನು ಅದನ್ನ ಶೇಕಡಾ 15 ರಿಂದ 18ಕ್ಕೆ ಮತ್ತು ಶೇಕಡಾ 3 ರಿಂದ 5ಕ್ಕೆ ಏರಿಸಿದೆ. ಇದೆಲ್ಲವನ್ನೂ ಕೂಡ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾಡಿದ್ದು ಎಂದರು.
ಅಂದು ಶೇಕಡಾ 23 ರಷ್ಟು ತೀರ್ಮಾನ ಮಾಡಿದ್ದು, ಈಗಲೂ ಜಾರಿಯಲ್ಲಿ ಇದೆ. ಒಳ ಮೀಸಲಾತಿ ಬಗ್ಗೆ ಈಗ ಸರ್ಕಾರ ಕೇಂದ್ರಕ್ಕೆ ಕಳಿಸಿದೆ. ಇಷ್ಟು ವರ್ಷ ಕೆಲವೇ ಕೆಲವು ಕುಟುಂಬಗಳು ಫಲ ಅನುಭವಿಸಿವೆ. ನಾವು ಮಾಡಿರುವ ಜಾತಿಗಳಲ್ಲಿ ಕೆಲವೇ ಕೆಲವು ಕುಟುಂಬಗಳು ಈ ಮೀಸಲಾತಿಯ ಫಲ ಅನುಭವಿಸಿವೆ ಎಂದರು.