ತುಮಕೂರಿ (Tumakuru) ನ ಗುಬ್ಬಿ ತಾಲ್ಲೂಕು ಹೊಸಹಳ್ಳಿಯಲ್ಲಿದ್ದ ಚಿತ್ರದುರ್ಗ ಮುರುಘಾ ಮಠ (Murugha mutt) ದ ಶಾಖಾ ಮಠವಾಗಿದ್ದ ಪಡುವಲ ಮಠವನ್ನು ಒಂದು ತಿಂಗಳ ಹಿಂದೆ ರೇವತಿ ಖಾಲಿ ಮಾಡಿದ್ದಾರೆ. ರೇವತಿ ಮರುಘಾ ಶರಣರ ಶಿಷ್ಯೆಯಾಗಿದ್ದರು. ಗುಬ್ಬಿ ಹೊಸಹಳ್ಳಿಯಲ್ಲಿ ಪಡುವಲ ಮಠ 18 ಎಕರೆ ಜಾಗದಲ್ಲಿತ್ತು.
ಈ ಜಾಗವನ್ನು ಮರುಘಾ ಮಠಕ್ಕೆ ಗ್ರಾಮಸ್ಥರು ಹಸ್ತಾಂತರಿಸಿದ್ದರು. ರೇವತಿ (Revathi) ಕಳೆದ 10- 12 ವರ್ಷದಿಂದ ರೇವತಿ ಮಠದ ಜಾಗವನ್ನು ನೋಡಿಕೊಳ್ಳುತ್ತಿದ್ದರು. ಸುಮಾರು 50ಕ್ಕೂ ಹಸುಗಳನ್ನು ಸಾಕಿಕೊಂಡು ರೇವತಿ ವಾಸವಾಗಿದ್ದರು. ಅಕ್ಕ, ಅಪ್ಪ, ಅಮ್ಮನೊಂದಿಗೆ ಪಡುವಲ ಮಠದಲ್ಲಿ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಹಸುಗಳೊಂದಿಗೆ ರೇವತಿ ಜಾಗ ಖಾಲಿ ಮಾಡಿದ್ದಾರೆ.
ಇದನ್ನು ಓದಿ :- ಮೂವರು ಮಕ್ಕಳ ಜೊತೆ ನೀರಿನ ಸಂಪಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ