ಬೆಂಗಳೂರು: ಸಣ್ಣಕಾರಣಕ್ಕಾಗಿ ಸ್ನೇಹಿತರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
26 ವರ್ಷದ ಭರತ್ ಕೊಲೆಯಾದ ಯುವಕ . ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಈತ 26 ವರ್ಷದ ಬಿಬಿಎಂಪಿ ಸಿಬ್ಬಂದಿಯಾಗಿದ್ದ. ಕುತ್ತಿಗೆಗೆ ಹರಿತವಾದ ವಸ್ತುವಿನಿಂದ ಇರಿದ ಆರೋಪದ ಮೇಲೆ 29 ವರ್ಷದ ಪ್ರಭು ಎಂಬ ಆಟೋರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರು ಮಧ್ಯರಾತ್ರಿ ಕೆಲವು ಸ್ನೇಹಿತರು ಪಂತರಪಾಳ್ಯ ಬಳಿ ಮೃತ ಸ್ನೇಹಿತನನ್ನು ನೋಡಲು ಹೋಗಿದ್ದರು. ಈ ವೇಳೆ ಪ್ರಭು ಮತ್ತು ಭರತ್ ಮಾತುಕತೆ ನಡೆಸುತ್ತಿದ್ದಾಗ ಮಾತು ವಾಗ್ವಾದಕ್ಕೆ ತಿರುಗಿದೆ. ಬಳಿಕ ಮಾತು ತಾರಕಕ್ಕೇರಿ ಜಗಳವಾಗಿದ್ದು ಇದರಿಂದ ಕೋಪಗೊಂಡ ಪ್ರಭು ಭರತ್ನ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳಿಗೆ ಹರಿತವಾದ ವಸ್ತುವಿನಿಂದ ಇರಿದಿದ್ದಾನೆ.