ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಚಿವ ಸಂಪುಟದ ಆಯ್ಕೆ ಪ್ರಕ್ರಿಯೇ ಭರದಿಂದ ಸಾಗಿದೆ.ನಿನ್ನೆ ಇಂದಲೂ ಸಭೆಗಳ ಮೇಲೆ ಸಭೆ ಮಾಡುತ್ತಿದ್ದಾರೆ.ಇವತ್ತು ಸಚಿವರ ಪಟ್ಟಿ ಅಂತಿಮವಾಗಲಿದೆ.ಈ ಹಿನ್ನೆಲೆ ಸಚಿವ ಸ್ಥಾನ ಪಡೆದುಕೊಳ್ಳಬೇಕು ಎಂದು ಶತಾಯಗತಾಯ ಪ್ತಯತ್ನವನ್ನ ಸಚಿವಾಂಕ್ಷೀಗಳು ಮಾಡುತ್ತಿದ್ದಾರೆ.ಕೊನೆಯ ಹಂತದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆ ವಾಲ ,ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಅವರನ್ನ ಭೇಟಿ ಮಾಡುತ್ತಿದ್ದಾರೆ.ನಿನ್ನೆಯಿಂದಲೂ ದೆಹಲಿಯಲ್ಲಿ ಟೀಕಾಣಿ ಹೂಡಿರುವ ಸಚಿವಾಂಕ್ಷೀಗಳು ಇಂದು ಕೊನೆಯ ಹಂತದಲ್ಲಿ ಸರ್ಕಸ್ ನಡೆಸುತ್ತಿದ್ದಾರೆ.
ಇನ್ನೊಂದು ಕಡೆ ಪ್ರಭಾವಿ ಖಾತೆ ಪಡೆದುಕೊಳ್ಳಲು ಸಚಿವರ ಪಟ್ಟಿಯಲ್ಲಿದ್ದ ಹಿರಿಯ ನಾಯಕರು ಪ್ರಯತ್ನಿಸುತ್ತಿದ್ದಾರೆ,ಡಿಕೆಶಿವಕುಮಾರ್,ಸಿದ್ದರಾಮಯ್ಯ ಮೀರಿ ಖುದ್ದಾಗಿ ಎಐಸಿಸಿ ನಾಯಕರ ಮುಂದೆನೇ ಅವರ ಬೇಡಿಕೆ ಇಡುತ್ತಿದ್ದಾರೆ.ಕಂದಾಯ,ನಗರಾಭಿವೃದ್ಧಿ,ಜಲಸಂಪನ್ಮೂಲ,ಇಂಧನ,ಸಾರಿಗೆ,ಗ್ರಹ ಖಾತೆ,ಕೃಷಿ,ಐಟಿ ಬಿಟಿ ಈ ಖಾತೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.ಎಐಸಿಸಿ ನಾಯಕರು ಎಲ್ಲಾ ನಾಯಕರ ಮಾತಿ ಆಲಿಸುತ್ತಿದ್ದಾರೆ ಅಂತೆ ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಯಾವ ಯಾವ ನಾಯಕರ ಬೇಡಿಕೆ ಈಡೈರುಸುತ್ತಾರೋ ಕಾದು ನೋಡಬೇಕಿದೆ.
ವರದಿ : ಬಸವರಾಜ ಹೂಗಾರ