ಗೀತಾಂಜಲಿ ರಾಜ್ ನ್ಯೂಸ್
ಬೆಂಗಳೂರು: ಶೈಕ್ಷಣಿಕ ವರ್ಷದ ಸಾಲಿನಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಗುತ್ತದೆ ಹಾಗಾದರೆ ಈ ವರ್ಷ ವಿದ್ಯಾರ್ಥಿಗಳಿಗೆ ಯಾವ ರೀತಿ ಸಮವಸ್ತ್ರ ಕೊಡಲಾಗುತ್ತೆ. ಸಮವಸ್ತ್ರದ ಜೊತೆ ಮಾಸ್ಕನ್ನು ಕೂಡ ಸರ್ಕಾರದಿಂದ ವಿತರಿಸಲಾಗುತ್ತಾ ? ಹೇಗೆ ? ಎಂಬುದರ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಶಾಲೆ ಏನೋ ಆರಂಭವಾಯ್ತು . ಆದ್ರೆ ಇನ್ನೇನ್ನು ಕೆಲವೇ ದಿನಗಳಲ್ಲಿ ಶೈಕ್ಷಣಿಕ ವರ್ಷ ಕೂಡ ಪ್ರಾರಂಭವಾಗುತ್ತದೆ …ಹೌದು ,ಬೇಸಿಗೆ ಮುಗಿದ ನಂತರ ಅಂದ್ರೆ ಜೂನ್ ೧ ರಿಂದ ಶಾಲೆ ಆರಂಭವಾಗಲಿದೆ. ಶಾಲೆ ಆರಂಭವಾದ ಬೆನ್ನಲ್ಲೇ ಸಮವಸ್ತç ಕೂಡ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ….
ಶಾಲೆಗಳಲ್ಲಿ ಸಮವಸ್ತç ಕೊಡುವುದರ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಮಾತನಾಡುತ್ತಾ ಶಾಲೆಗಳಲ್ಲಿ ಸಮವಸ್ತç ಕೊಡುವುದರ ಕುರಿತು ಇನ್ನು ಪ್ರಸ್ತಾವನೆ ಮಾಡಿಲ್ಲ. ಆದ್ರೆ ಸದ್ಯದಲ್ಲೇ ಪ್ರಸ್ತಾವನೆ ಮಾಡುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಸ್ಕ್ ಹಾಕಬೇಕು. ಮಾಸ್ಕ್ ಹಾಕುವುದು ಕಡ್ಡಾಯಯೆಂದು ಹೇಳಿದ್ದರು.
ಇನ್ನು, ಇದೇ ವಿಷಯವಾಗಿ ಶಿಕ್ಷಣ ತಜ್ಞರು, ಪೋಷಕರು ಮಕ್ಕಳಿಗೆ ಸಮವಸ್ತçದ ಜೊತೆ ಮಾಸ್ಕ್ ಕೊಟ್ರೆ ಒಳ್ಳೆಯದು .ಇದು ಒಂದು ಒಳ್ಳೆಯ ಚಿಂತನೆ. ಕೋವಿಡ್ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮವಸ್ತçದ ಜೊತೆ ಮಾಸ್ಕ್ ಕೊಡಿ ಎಂದು ಆಗ್ರಹಿಸಿದ್ರು.
ಒಟ್ನಲಿ ಸರ್ಕಾರಿ ಶಾಲೆಗಳಲ್ಲಿ ಸಮವಸ್ತçದ ಜೊತೆ ಮಾಸ್ಕ್ ವಿತರಣೆ ಮಾಡಿದ್ರೆ ಕೋವಿಡ್ ಎಂಬ ಮಹಾಮರಿ ವಕ್ಕರಿಸದಂತೆ ತಡೆಯಬಹುದು ಜೊತೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಸಮವಸ್ತçದ ಜೊತೆ ಮಾಸ್ಕ್ ನ್ನ ವಿದ್ಯಾರ್ಥಿಗಳಿಗೆ ಕೊಡ್ತಾರಾ? ಎಂಬುದನ್ನ ಕಾದು ನೋಡ್ಬೇಕಿದೆ.