ಬೆಂಗಳೂರು: ಸಿಎಂ, ಅಧ್ಯಕ್ಷರು ಜಿಲ್ಲಾ ನಾಯಕರ ಜತೆ ಮಾತಾಡಿ ನಿಗಮಮಂಡಳಿ ಪಟ್ಟಿ ಮಾಡಬೇಕು. ಅದರೆ ಈಗ ಜನರಲ್ ಸೆಕ್ರೆಟರಿ ಅವರೇ ಮಾಡ್ತಿದ್ದಾರೆ ಅದಕ್ಕೆ ಸ್ವಲ್ಪ ವಿಳಂಭ ಆಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ನಿಗಮಮಂಡಳಿ ವಿಳಂಬ ವಿಚಾರವಾಗಿ ಸದಾಶಿವನಗರದಲ್ಲಿ ಮಾತನಾಡಿದ ಅವರು ನಿಗಮ-ಮಂಡಳಿ ನೇಮಕಾತಿಗೆ ನಮ್ಮ ಅಭಿಪ್ರಾಯವನ್ನು ಪಡೆಯಬೇಕು. ನಮ್ಮನ್ನ ಯಾರು ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿರಬಹುದು. ಆದರೆ ನಮ್ಮ ಜತೆ ಮಾತಾಡಿ ಪಟ್ಟಿ ಮಾಡಿಲ್ಲ. ಜಿಲ್ಲಾವಾರು ಕೆಲಸ ಮಾಡಿರೋದು ನಮಗೆ ಗೊತ್ತಿರುತ್ತೆ. ಸಿಎಂ, ಪಕ್ಷದ ಅಧ್ಯಕ್ಷರು ಇದ್ದಾರೆ ಅವರಿಗೆ ಜವಾಬ್ದಾರಿ ಬಿಡಬೇಕು. ಸಿಎಂ, ಅಧ್ಯಕ್ಷರು ಜಿಲ್ಲಾ ನಾಯಕರ ಜತೆ ಮಾತಾಡಿ ಪಟ್ಟಿ ಮಾಡಬೇಕು. ಅದರೆ ಈಗ ಜನರಲ್ ಸೆಕ್ರೆಟರಿ ಅವರೇ ಮಾಡ್ತಿದ್ದಾರೆ.
ಪಟ್ಟಿ ನಿಧಾನವಾಗಿದೆ. ನೋಡೋಣ ಏನ್ ಮಾಡ್ತಾರೆ ಅಂತ. ಕಾರ್ಯಕರ್ತರು ಯಾರ್ ಯಾರ್ ಕೆಲಸ ಮಾಡಿದ್ದಾರೆ ನನಗೆ ಗೊತ್ತಿದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರೋದಕ್ಕೆ ಹೀಗೆ ಆಗಿದೆ. ಕೆಲಸ ಮಾಡೋರಿಗೆ ಕೊಡದೇ ಹೋದ್ರೆ,ಕೆಲಸ ಮಾಡಿರೋರಿಗೆ ನೋವಾಗುತ್ತದೆ. ಅಸಮಾಧಾನ ಆಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರನ್ನ ಕೇಳಬೇಕಾಗುತ್ತದೆ ಎಂದು ಹೈಕಮಾಂಡ್ ನಾಯಕರ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ವರದಿ : ಬಸವರಾಜ ಹೂಗಾರ