Political NewsState News

ಅನಂತ್ ಕುಮಾರ್ ಹೆಗಡೆ ಮೈಂಡ್ ಯುವರ್ ಟಂಗ್-ಪ್ರದೀಪ್ ಈಶ್ವರ್

ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಸ್ವತ್ತಾ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಕಿಡಿ ಕಾರಿದ್ದಾರೆ.. ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನ ಕಾರಿ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅನಂತ್ ಕುಮಾರ್ ಹೆಗಡೆ ಮೈಂಡ್ ಯುವರ್ ಟಂಗ್. ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಸ್ವತ್ತಾ..? ಹಿಂದೂ ಧರ್ಮನ ನಿಮ್ಮ ಅಪ್ಪನ ಮನೆ ಆಸ್ತಿ ತರಹ ಆಡ್ತಿದ್ದೀರಲ್ಲ.. ನಾಲಿಗೆ ಕಂಟ್ರೋಲ್ ನಲ್ಲಿ ಇಟ್ಕೊಳ್ಳಿ ಹೆಗಡೆಯವರೇ. ಬಿಜೆಪಿಯಲ್ಲಿ ಟಿಕೇಟ್ ಸಿಗಲ್ಲ ಎನ್ನೋದು ಗೊತ್ತಾಗಿದೆ. ಇವರ ಬಾಯಿ ಚಪಲದಿಂದ ಹಿಂದೆ ಮಂತ್ರಿ ಗಿರಿ ಕಳೆದುಕೊಂಡರು. ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ.. ಮನ್ ಕಿ ಬಾತ್ ಜೊತೆಗೆ ಕಾಮ್ ಕಿ ಬಾತ್ ಮಾತಾಡೋಣ ಬನ್ನಿ. ನಾವೂ ಹಿಂದೂ ಧರ್ಮದವರೇ, ನಮಗೂ ಶ್ರೀರಾಮನ ಮೇಲೆ ನಂಬಿಕೆ ಇದೆ.

ನೀವು ಒಂದು ಮಾತಾಡಿದರೆ ನಾವು ನಾಲ್ಕು ಮಾತಾಡ್ತೇವೆ. ಬನ್ನಿ ಈ ಫೈಟ್ ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡೋಣ. ನಮ್ಮ ಎದೆ ಬಗೆದರೆ ಶ್ರೀರಾಮನೂ ಕಾಣ್ತಾನೆ, ಸಿದ್ದರಾಮಯ್ಯ ನೂ ಕಾಣ್ತಾರೆ, ಅಂಬೇಡ್ಕರ್ರೂ ಕಾಣ್ತಾರೆ, ಸಿದ್ದಗಂಗಾ ಶ್ರೀಗಳೂ ಕಾಣ್ತಾರೆ. ಪ್ರಚೋದನೆಯಿಂದ ಏನಾದ್ರೂ ಹೆಚ್ಚೂ ಕಡಿಮೆ ಆದ್ರೆ ಹೆಗಡೆ ಬರ್ತಾರಾ..? ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅನಂತ್ ಕುಮಾರ್ ಹೆಗಡೆ ವಿರುದ್ದ ಎಫ್ಐಆರ್ ಆಗಬೇಕು ಅವರನ್ನು ಒಳಗೆ ಹಾಕಬೇಕು ಎಂದು ಆಗ್ರಹಿಸಿದರು.

ಇನ್ನೂ ಪ್ರತಾಪ್ ಸಿಂಹರನ್ನ ಅಯೋಗ್ಯ ಮುಠ್ಠಾಳ ಅಂತ ಅಂದಿದ್ದೆ. ಅಯೋಗ್ಯ , ಮುಠ್ಠಾಳರನ್ನ ಅಯೋಗ್ಯ ಮುಠ್ಠಾಳ ಅಂತ ಕರೆದರೆ ತಪ್ಪಿಲ್ಲ. ಕೊಚ್ಚೆಗೆ ಕೈ ಹಾಕೋದು ಹಂದಿಗಳ ಕೆಲಸ, ಹಂದಿಗಳು ಕೈ ಹಾಕುವ ಕೆಲಸ ನೀವು ಮಾಡಬೇಡಿ. ಪ್ರತಾಪ್ ಸಿಂಹ ಪಿರಿಯಾಪಟ್ಟಣ, ಹುಣಸೂರು ರೈತರ ಸಮಸ್ಯೆ ಕೇಳಿದ್ದಾರಾ..? ಕಾಪಿ ಬೆಳೆಗಾರರ ಸಮಸ್ಯೆ ಕೇಳಿದರಾ.. ಮೈಸೂರು -ಬೆಂಗಳೂರು ರೋಡು ನೀನು ಹಾಕ್ಸಿದ್ದಾ. ಯುಪಿಎ ಸರ್ಕಾರದ ಅವಧಿಯಲ್ಲಿ ‌ರೋಡ್ ಮಂಜೂರು ಆಗಿದ್ದು. ನಮ್ಮ ಸರ್ಕಾರ ಇದ್ದಾಗ ಭೂಸ್ವಾದೀನ ಆಗಿತ್ತು. ಈ ಸಲ ಚುನಾವಣೆಯಲ್ಲಿ ಸೋಲಿಸಿ, ನಮ್ಮ ಕಾವೇರಿ ನದಿಯಲ್ಲಿ ನೀನೇ ಪಾಪ ತೊಳೆದುಕೋ. ಸಿದ್ದರಾಮಯ್ಯ ನಮ್ಮ ಭವಿಷ್ಯ. ಈ ಬಾರಿ ಜನ ಪಾಠ ಕಲಿಸ್ತಾರೆ. ಚರ್ಚೆ ಗೆ ಸಿ ಟಿ ರವಿ, ಸಿಎಂ ಎಲ್ಲಾ ಬರಲಿ. ಧರ್ಮದ ವಿಚಾರ ಬಿಟ್ಟು, ಅಭಿವೃದ್ಧಿ ವಿಚಾರದ ಚರ್ಚೆ ‌ಲೈವ್ ಆಗಲಿ. ಮೈಸೂರಿಗೆ ಕರ್ಕೊಂಡು ಹೋಗಿ ಅಭಿವೃದ್ಧಿ ತೋರಿಸಿ, ನಾನು ಚಿಕ್ಕಬಳ್ಳಾಪುರಕ್ಕೆ ಕರ್ಕೊಂಡು ಹೋಗಿ ಅಭಿವೃದ್ಧಿ ತೋರಿಸುವೆ,ಪ್ರತಾಪ್ ಸಿಂಹ ಮೈಂಡ್ ಯುವರ್ ಟಂಗ್ ಎಂದು ತೀವ್ರ ವಾಗ್ದಾಳಿ ನಡೆಸಿದರು.

ವರದಿ : ಬಸವರಾಜ ಹೂಗಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!