ವಿಜಯನಗರ : ವೇಶ್ಯಾವಾಟಿಕೆ (prostitution) ನಡೆಸುತ್ತಿದ್ದ ಹೊಸಪೇಟೆಯ ರಾಣಿಪೇಟೆಯ ವೆಂಕಟೇಶ್ವರ ಲಾಡ್ಜ್ ಮೇಲೆ ಒಡನಾಡಿ ಸಂಸ್ಥೆ ಮತ್ತು ಪೊಲೀಸರ ಜಂಟಿ ದಾಳಿ ಮಾಡಿದ್ದಾರೆ.
ಕೋಲ್ಕತ್ತಾ ಮೂಲದ ಇಬ್ಬರು, ಗುಂತಕಲ್, ಕೂಡ್ಲಿಗಿ ಮೂಲದ ಒಟ್ಟು ನಾಲ್ವರು ಮಹಿಳೆಯ ರಕ್ಷಣೆ ಮಾಡಿದ್ದು, ವಿಜಯನಗರ, ಕೋಲ್ಕತ್ತಾ ಮೂಲದ 10 ಪುರುಷರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಹೊಸಪೇಟೆ ಟೌನ್ ಠಾಣೆ ಪೊಲೀಸರಿಂದ ಪ್ರಕರಣದ ದಾಖಲಾಗಿ, ತನಿಖೆ ಮುಂದುವರೆದಿದೆ.