ಬೆಂಗಳೂರು : ಆನೆ ಅಂದ್ರೆ ಅದು ಆನೇಕಲ್ ಅಂತಲೇ ಪ್ರಖ್ಯಾತಿ, ಅದರಲ್ಲೂ ಬನ್ನೇರುಘಟ್ಟ ಅಂದ್ಮೇಲೆ ಎಲ್ಲಿಯೂ ಸಿಗದಷ್ಟು ಆನೆಗಳು ಬಿಬಿಪಿ ಸಲಹುವ ಕೇಂದ್ರಲ್ಲಿವೆ ಇತ್ತೀಚೆಗೆ ಒಂದು ಅಪರೂಪದ ಆನೆ ಮರಿ ಜನಿಸುವ ಮುಖಾಂತರ ಒಟ್ಟು ಆನೆಗಳ ಸಂಖ್ಯೆ ಇಪ್ಪತ್ತೈದಕ್ಕೆ ಏರಿದೆ.
ಇತ್ತೀಚೆಗೆ ಉದ್ಯಾನವನಕ್ಕೆಹೊಸ ಹುರುಪನ್ನು ಕೊಟ್ಟ ಮುದ್ದಾದ ಆನೆ ಮರಿಯಿದು. ತನ್ನ ತಾಯಿ ರೂಪಳನ್ನೂ ಮರೆತು ಚಿಕ್ಕಮ್ಮವೇದ-ದೊಡ್ಡಮ್ಮ ರೀಟಾಳ ಬಳಿ ಹಾಲು ಕುಡಿಯಲು ತವಕಿಸುತ್ತಿದೆ. ಇದರ ಹುಟ್ಟಿನೊಂದಿಗೆ ಒಟ್ಟು ಆನೆಗಳ ಸಂಖ್ಯೆ 25 ಕ್ಕೆ ಏರಿರುವುದು ಇಲ್ಲಿನ ಮಾವುತರಿಗಷ್ಟೇ ಅಲ್ಲದೆ ಕಾವಡಿಗರಿಗೂ ಸಿಬ್ಬಂದಿಯ ಸಂತಸಕ್ಕೆ ಕಾರಣವಾಗಿದೆ. ರೂಪಾ ಎಂಬ ತಾಯಿಗೆ ಈ ಮರಿಯನ್ನೂ ಸೇರಿಸಿ ಮೂರು ಮರಿಗಳಿವೆ ಮೊದಲನೆಯದು ಗೌರಿ, ಎರಡನೆಯದು ಬಸವ ಮತ್ತು ಈ ಮರಿ. ಬರೋಬ್ಬರಿ 120 ಕಿಲೋ ತೂಕದೊಂದಿಗೆ ಆರೋಗ್ಯವಾಗಿದ್ದು ತನ್ನೆಲ್ಲಾ ಪರಿವಾರಕ್ಕೆ ಮುದ್ದಿನ ಮರಿಯಾಗಿ ತೀಟಲೆ ಮಾಡುತ್ತಾ ಬೆಳೆಯುತ್ತಿದೆ.
ಕಳೆದ ಡಿ 11 ರಂದು ಜನಿಸಿದ ಎಳೆಮರಿ ಇದಾಗಿದ್ದು ತುಂಟಾಟದಲ್ಲಿ ಎತ್ತಿದ ಕೈ. ಉದ್ಯಾನದ ಒಳಗಡೆಯ ಸೀಗೆಕಟ್ಟೆಯ ಆನೆ ನಿರ್ವಹಣಾ ಕೇಂದ್ರದಲ್ಲಿ ಮಾವುತರ ಆರೈಕೆಯೊಂದಿಗೆ ಸೊಂಪಾಗಿ ಸಫಾರಿಗೆ ಬರುವ ಪ್ರಾಣಿ ಪ್ರಿಯರ ಪಾತ್ರಕ್ಕೆ ಈ ಮರಿ ಆನೆ ಸಾಕ್ಷಿಯಾಗಿದೆ. ಇನ್ನು ರೂಪ 2008ರಲ್ಲಿ ಬನ್ನೇರುಘಟ್ಟ ಆನೆ ಪಡೆಗೆ ಸೇರ್ಪಡೆಗೊಂಡು ಇಲ್ಲಿಗೆ 15 ವರ್ಷಗಳು ಕಳೆದಿವೆ. ಬೆಳಗ್ಗೆ 8.30 ರಿಂದಸಹಜವಾಗಿ ಪ್ರತಿದಿನ ಕಾಡಿಂದ ಬಂದು ಸೀಗೆಕಟ್ಟೆ ಆನೆ ಸಲಹುವ ಕೇಂದ್ರಕ್ಕೆ ಬಂದು ಕೆರೆಯಲ್ಲಿ ಮಿಂದು ಮಾವುತ-ಕಾವಾಡಿಗರು ಕೊಟ್ಟ ಮುದ್ದೆ ಸೇವಿಸಿ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸಂಜೆ 6 ರ ನಂತರ ಕಾಡಿಗೆ ಸೇರಿ ಅಲ್ಲಿನ ಕಾಡಾನೆಗಳೊಂದಿಗೆ ಇಡೀ ರಾತ್ರಿ ಸುತ್ತಾಡಿ ಬೆರೆತು ಮರಳಿ ಉದ್ಯಾನಕ್ಕೆ ಬಂದು ಸಫಾರಿ ಪ್ರಿಯರಿಗೆ ದರ್ಶನ ಕೊಡುವ ಪರಿಪಾಟವಿದೆ ಹೀಗಾಗಿ ಎಲ್ಲಿಯೂ ಸಿಗದಷ್ಟು ಆನೆ ಸಂಕುಲ ಬನ್ನೇರುಘಟ್ಟದಲ್ಲಿ ಸಿಗುತ್ತವೆ. ಇದಕ್ಕೆ ಇಲ್ಲಿನ ಪ್ರಾಣಿಗಳ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದ ಪರಿಸರ ಇಲ್ಲಿದೆ.
ರೂಢಿಯಂತೆ ದತ್ತು ಪಡೆಯುವವರು ಆನೆ ಮರಿಗೆ ಹೆಸರನ್ನಿಡುವುದಕ್ಕೆ ಉದ್ಯಾನವನದಲ್ಲಿ ಅವಕಾಶವಿದೆ ಅದರಂತೆ ವನಶ್ರೀ 2 ಮರಿಗಳಿಗೆ ಮಹಾವೀರ ಮತ್ತು ಓಂಗಂಗಾ ಎಂದು ದತ್ತು ಪಡೆದ ಖಾಸಗೀ ಕಂಪೆನಿಯೊಂದು ಹೆಸರಿನ್ನಿಟ್ಟಿದೆ.
ಹಾಗೆಯೇ ಈ ಮರಿಗೂ ಆರು ತಿಂಗಳು ಕಳೆದರೆ ಒಂದು ಹೆಸರು ಇಡಲಾಗುತ್ತದೆ. ಕ್ಯಾಮೆರಾ ಹಿಡಿದು ಬಂದರೆ ಮರಿಯನ್ನು ತನ್ನೆಡೆಗೆ ಸೆಳೆದು ಪಕ್ಕಕ್ಕೆ ಎಳೆದು ಕಾಪಾಡುತ್ತವೆ ಗಜಪಡೆ, ಅಷ್ಟರ ಮಟ್ಟಿಗೆ ಮರಿಯನ್ನು ಪ್ರೀತಿಯಿಂದ ಸಲಹುತ್ತಿವೆ ಆನೆ ಹಿಂಡು. ರೂಪ ಹೆತ್ತ ತಾಯಿಯಷ್ಟೇ ಆದರೆ ಉಳಿದ ಆನೆಗಳು ಮರಿಯನ್ನು ತನ್ನ ಮರಿಯಂತೆಯೇ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿರುವುದು ನೋಡುಗರ ಕಣ್ಣಿಗೆ ಆನಂದ ನೀಡುತ್ತಿದೆ.
ಒಟ್ಟು ಆನೆಗಳು 25 ರಲ್ಲಿ 10 ಗಂಡು ಉಳಿದ ಮರಿಗಳನ್ನು ಸೇರಿ 15 ಹೆಣ್ಣು ಆನೆಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿವೆ. ಸಫಾರಿಯಲ್ಲಿನ ದೊಡ್ಡ ಆನೆಗಳ ನಡುವೆ ಪುಟ್ಟ ಪುಟ್ಟ ಉಳಿದ ಮರಿಗಳನ್ನು ನೋಡುವುದೇ ಸಂಭ್ರಮ, ಒಟ್ಟಾರೆ ಇತರೆ ಜೀವ ಸಂಕುಲಗಳನ್ನ ನೇರವಾಗಿ ಕಾಡಿನಲ್ಲೇ ಅವುಗಳ ಸ್ವೇಚ್ಚೆಯಾಗಿರುವ ದೃಶ್ಯ ನೋಡಲು ಪ್ರಾಣಿ ಪ್ರಿಯರಿಗೆ ಇದೊಂದು ಅಧ್ಯನ ತಾಣವಾಗಿ ಹೊರ ಹೊಮ್ಮಿದೆ. ಇನ್ನೂ ಅಪರೂಪದ ಅಳಿವಿನಂಚಿನಲ್ಲಿರುವ ಜೀವಿಗಳನ್ನು ಮಕ್ಕಳಂತೆ ಸಾಕುತ್ತಿರುವ ಸಿಬ್ಬಂದಿಗೆ ನಾವು ಕೃತಜ್ಞತೆಯನ್ನ ತಿಳಿಸಲೇ ಬೇಕಿದೆ.