ಮೈಸೂರು : ರಾಜ್ಯ ರಾಜಧಾನಿ ನಂತರ ಮೈಸೂರು ಜಿಲ್ಲೆಗೂ ಈಗ ಕುಡಿಯುವ ನೀರಿನ ಕ್ಷಾಮ ಉಂಟಾಗೋ ಭೀತಿ ಉಂಟಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ನಂತರ ಈಗ ಮೈಸೂರಿನಲ್ಲಿ ಕುಡಿಯುವ ನೀರಿನ ಆಹಾಕಾರ ಶುರುವಾಗುವಂತಿದೆ. ಮೈಸೂರಿನಲ್ಲಿ ಜನರಲ್ಲಿ ಕಾಡ್ತಿದೆ ಮತ್ತೆಲ್ಲಿ ಕುಡಿಯುವ ನೀರಿನ ಕ್ಷಾಮ ಉಂಗುವುದೋ ಎಂಬ ಭೀತಿ. ಮೈಸೂರಿನ ಕಾವೇರಿ ಕೊಳ್ಳದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ನೀರಿದ್ದು, ಮುಂಗಾರು ಮಳೆಯು ಬಾರದ ಕಾರಣ ಕುಡಿಯುವ ನೀರಿಗೆ ಆಹಾಕಾರ ನಿಮಾಣವಾಗುವ ದಿನಗಳು ಹತ್ತಿರದಲ್ಲೇ ಇವೆ. ಹೀಗಾಗಿ ರೈತರಲ್ಲಿ ಅಷ್ಟೇ ಅಲ್ಲದೇ ನಗರವಾಸಿಗಳಲ್ಲೂ ಆತಂಕ ಹೆಚ್ಚಾರುವುದು ಕಂಡು ಬರುತ್ತಿದೆ.
ಮೈಸೂರಿನ ಜನರು ಕುಡಿಯುವ ನೀರಿಗಾಗಿ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದ ನೀರಿನ ಮೇಲೆ ಅವಲಂಭಿತರಾಗಿದ್ದಾರೆ. ಮೈಸೂರಿನ ನಗರ ಪ್ರದೇಶದ ವಾಸಿಗಳಿಗೆ ಪ್ರತಿನಿತ್ಯ ಕುಡಿಯಲು ಸರಾಸರಿ ೩೦೫ ಎಂಎಲ್‌ಡಿ ನೀರು ಬೇಕಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲೂ ಕೂಡಾ ಅಗತ್ಯದಷ್ಟು ಕುಡಿಯುವ ನೀರನ್ನು ಸರಭರಾಜು ಮಾಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 20 ದಿನಗಳಿಗೆ ಸಾಕಾಗುವಷ್ಟು ಕುಡಿಯುವ ನೀರಿದೆ, ಆದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ.
ಮೈಸೂರು ಜನರು ಕಬಿನಿ ಜಲಾಶಯಕ್ಕಿಂತ ಕಾವೇರಿ ಜಲಾಶಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕೆಆರ್ಎಸ್ ಅಣೆಕಟ್ಟಿನಿಂದ ಮೈಸೂರಿಗೆ ನಿತ್ಯ ಬರೋಬ್ಬರಿ 245 ಎಂಎಲ್ಡಿ ನೀರು ಪೂರೈಕೆ ಆಗುತ್ತಿತ್ತು. ಕಬಿನಿ ಅಣೆಕಟ್ಟಿನಿಂದ 60 ಎಂಎಲ್ಡಿ ನೀರು ಪೂರೈಕೆ ಆಗುತ್ತಿತ್ತು.
ಖಾಲಿಯಾದ ಕೆಆರ್‌ಎಸ್ :
ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂ ನೀರು ಹಾಗೂ ಹಸಿರಿನ ಸೌಂದರ್ಯದಿಂದ ಕಳೆದ ವರ್ಷ ಸರ್ಗಕ್ಕೆ ಕಿಚ್ಚು ಹಚ್ಚುವಂತೆ ಇತ್ತು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕಾವೇರಿ ತಾಯಿಯ ಸೌಂದರ್ಯ ಅಕ್ಷರಶಃ ಕಳೆಗುಂದಿದೆ.
ಕಳೆದ ವರ್ಷ ಇದೇ ದಿನದ ಆಸುಪಾಸಿನಲ್ಲಿ ಕೆಆರ್ಎಸ್ ಡ್ಯಾಂ ದೃಶ್ಯ ನೋಡಿದ್ರೆ ಕಣ್ಣಾಯಿಸಿದ ದೂರವೆಲ್ಲಾ ನೀರು, ಅದರ ಸುತ್ತೇಲ್ಲಾ ಹಸಿರಿನ ರಾಶಿ. ಈ ನೀರು ಮತ್ತು ಹಸಿರು ಎಂಬ ಎರಡು ಆಭರಣಗಳನ್ನು ಧರಿಸಿ ಕಾವೇರಿ ಮಾತೆ ಸೌಂದರ್ಯದ ದೇವತೆಯ ರೀತಿ ಕಂಗೊಳಿಸುತ್ತಾ ಇದ್ದಳು.
ಆದ್ರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆ ಕೆಆರ್ಎಸ್ ಡ್ಯಾಂನ ನೀರಿನ ಮಟ್ಟ ದಿನೇ ದಿನೇ ಕುಸಿತ ಕಾಣುತ್ತಿದೆ. ಇದರಿಂದ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಒಂದು ಕಡೆ ಇದ್ರೆ, ಇನ್ನೊಂದೆಡೆ ಸೌಂದರ್ಯ ದೇವತೆ ರೀತಿಯಲ್ಲಿ ಕಂಗೊಳಿಸುತ್ತಿದ್ದ ಕಾವೇರಿ ಮಾತೆ ಕಳೆಗುಂದಿದ್ದಾಳೆ.