ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾೂಕಿನ ಮುಗಳಖೋಡ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 21 ರಲ್ಲಿ ನಡೆದಿರುವ ಈ ರಸ್ತೆ ಕಾಮಗಾರಿ ಈ ಹಿಂದಿನ ಶಾಸಕ ಪಿ ರಾಜೀವ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ದುರಾಡಳಿತವನ್ನು ಎತ್ತಿ ಹೇಳುವಂತಿದೆ.
ಮೂಲಭೂತ ಸೌಕರ್ಯಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹತ್ತು ಹಲವಾರು ಯೋಜನೆಗಳನ್ನ ಜಾರಿ ಮಾಡುತ್ತಲೇ ಬಂದಿವೆ. ಆದರೆ, ಮೂಲಭೂತ ಸೌಖರ್ಯಗಳ ಹೆಸರಿನಲ್ಲಿ ಜೇಬ್ ಬರ್ತಿ ಮಾಡಿಕೊಳ್ಳುತ್ತಿರುವ ಆಸಾಮಿಗಳೆ ಬೇರೆ.
ಮುಗಳಖೋಡ ಪಟ್ಟಣದ ವಾರ್ಡ್ ಸಂಖ್ಯೆ 21ರ ಯಾದ್ಯಾನಕೋಡಿ ತೋಟದ ರಸ್ತೆ ಕಾಮಗಾರಿಯು ಕಳಪೆಯಲ್ಲಿ ಕಳಪೆಯಾಗಿರುವುದು ವಿಷಾದನೀಯ ಹಾಗೂ ಈ ಹಿಂದಿನ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶೌಚಾಲಯ, ನೀರು, ರಸ್ತೆಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನೇಕ ಯೋಜನೆಗಳು ಜಾರಿಯಾಗುತ್ತಲೇ ಇವೆ, ಜನರ ಸಮಸ್ಯೆಗೆ ನಾಂದಿ ಹಾಡುವ ಪ್ರಯತ್ನ ಮಾಡುತ್ತಲೇ ಇರುವ ಕೇಂದ್ರ ಹಾಗೂ ರಾಜ್ಯ ಸರಕಾರದ ನಡೆಯನ್ನ ಒಂದೆಡೆ ಮೆಚ್ಚಲೇ ಬೇಕು. ಆದರೆ, ರಸ್ತೆ ಕಾಮಗಾರಿಯ ಹೆಸರಿನಲ್ಲಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿ ವಾರ್ಡ್ ಸದಸ್ಯರು ಹಾಗೂ ಕಾಮಗಾರಿಯನ್ನು ಪೂರ್ಣಗೊಳಿಸಿದ ಗುತ್ತಿಗೆದಾರರು ನಾವೇ ಅಭಿವೃದ್ಧಿಯ ಹರಿಕಾರರು ಅಂತ ವಾಟ್ಸಪ್ ಗ್ರೂಫ್ ಗಳಲ್ಲಿ ತಮ್ಮ ಪ್ರತಿಷ್ಠೆಯನ್ನ ಅನಾವರಣಗೊಳಿಸಿದ್ದೆ, ಗೊಳಿಸಿದ್ದು, ಆದರೆ ಆ ಕಾಮಗಾರಿ ನಡೆದಿರುವುದು ಮಾತ್ರ ಕಳಪೆಯಲ್ಲಿ ಕಳಪೆ.
ಯಾರಾದ್ರೂ ನೋಡಿದರೆ ಹೀಗೂ ಉಂಟೆ? ಎನ್ನುವಂತಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿರುವ ಈ ರಸ್ತೆ ಡಾಂಬೀಕರಣ ಕಾಮಗಾರಿಯ ರಸ್ತೆಯ ಮಧ್ಯ ಬ್ರದಾವನ ನಿರ್ಮಾಣವಾಗಿದೆ. ರಸ್ತೆಗೆ ಬಳಕೆಯಾಗಬೇಕಿದ್ದ, ಮೆಟ್ಲಿಂಗ್, ಸಮರ್ಪಕ ಮುರುಂ ಹಾಗೂ ಡಾಂಬರೀಕರಣ ಆಗದೇ ಇರುವುದರಿಂದ ನಿನ್ನೆ ಮೊನ್ನೆಯಷ್ಟೇ ಮಾಡಿದ ರಸ್ತೆಯ ಡಾಂಬರೀಕರಣ ಕಿತ್ತು ಹೋಗುತ್ತಿದೆ. ರಸ್ತೆಯ ಮಧ್ಯದಲ್ಲಿ ಹುಲ್ಲು ಹುಲುಸಾಗಿ ಬೆಳೆಯುತ್ತಿದೆ. ಸಾರ್ವಜನಿಕ ಕಾಮಗಾರಿಯನ್ನು ಈ ರೀತಿ ಅವ್ಯವಸ್ಥೆಗೆ ಗುರಿ ಮಾಡಿರುವ ಅಧಿಕಾರಿಯ ವಿರುದ್ಧ ಹಾಗೂ ಗುತ್ತಿಗೆದಾರರ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸುವುದರ ಮೂಲಕ ಸಾಮಾಜಿಕ ನ್ಯಾಯಕ್ಕೆ ಮನ್ನಣೆ ಕೊಡಬೇಕೆನ್ನುವುದು ನಮ್ಮ ಆಶಯ.