ಬೆಂಗಳೂರು: ಕಾಂತಾರ ಸಿನಿಮಾ ಇಡೀ ರಾಜ್ಯಾದ್ಯಂತ ಮನಗೆದ್ದಿದೆ. ಆ ಸಿನಿಮಾದಲ್ಲಿ ಕೋಣಗಳನ್ನು ಬಳಸಿಕೊಳ್ಳಲಾಗಿತ್ತು. ಆದ್ರೆ ಇದೇ ಕೋಣಗಳು ಬೆಂಗಳೂರಿನಲ್ಲಿ ನಡೆದಂತಹ ಕಂಬಳದಲ್ಲಿ ಭಾಗಿಯಾಗಿತ್ತು. ಈ ವೇಳೆ ಈ ಕೋಣಗಳು ಇದೀಗ ಚಿನ್ನದ ಪದಕವನ್ನು ಗೆದ್ದಿದೆ.
ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಅಡಿ ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ ಗಳಿಸಿಕೊಂಡಿದೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು.