ಏಯ್ ಬರ್ಕೋ ಯಾ ಪೇಪರ್ ಮುಂದಗಡ ಬರ್ಕೋ ಬೆಂಗ್ಳೂರ್ ನಂದು. ಈ ಡೈಲಾಗ್ ಶಿವಣ್ಣ ಅಭಿನಯದ ಜೋಗಯ್ಯ ಸಿನಿಮಾದ ಪೇಮಸ್ ಡೈಲಾಗ್. ಸದ್ಯ ರೌಡಿಗಳಿಗೂ ಈ ಡೈಲಾಗ್ ಒಂದು ರೀತಿ ಫೇವರೆಟ್. ಕಳೆದ ಎರಡು ವರ್ಷದ ಹಿಂದೆ ಬನಶಂ ದೇವಸ್ಥಾನ ಎದರು ಉದ್ಯಮಿ ಮದನ್ ಕೊಲೆ ಮಾಡಿ ಜೈಲು ಸೇರಿದ್ದ ಸಿದ್ದಾಪುರ ಮಹೇಶ ಕಳೆದವಾರ ಜೈಲಿನಿಂದ ರಿಲೀಸ್ ಆಗಿದ್ದಾನೆ. ರಿಲೀಸ್ ಗೆ ಮಹೇಶನ ಚೇಲಾಗಳಯ ಭರ್ಜರಿ ಬಿಲ್ಡಪ್ ಕೊಟ್ಟು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕಿದ್ದಾರೆ.
ಸದ್ಯ ಈ ವಿಡಿಯೋ ಪೊಲೀಸ್ರ ಕೈ ಸೇರಿದ್ದು ವಿಡಿಯೋ ನೋಡಿ ಪೊಲೀಸ್ ಅಧಿಕಾರಿಗಳು ಗರಂ ಆಗಿದ್ದಾರೆ. ಆದ್ರೆ ಮಹೇಶ ಮಾತ್ರ ಪೊಲೀಸ್ರಿಗೆ ತನ್ನ ಸುಳಿವು ನೀಡದೆ ತಲೆಮರೆಸಿಕೊಂಡಿದ್ದಾನೆ. ಇನ್ನೂ ಮಹೇಶನೆ ಈ ವಿಡಿಯೋ ಮಾಡಿಸಿರೋ ಮಾಹಿತಿ ಇದ್ದು ರಿಲೀಸ್ ಆಗಿ ಠಾಣೆಗೆ ಬಂದು ಸೈನ್ ಹಾಕಬೇಕಿದ್ದ ಮಹೇಶ ಈ ಹಿಂದೆ ಮರ್ಡರ್ ಆಗಿದ್ದ ಬಾಬ್ಲಿ ಬಾಮೈದ ಜಾರ್ಜ್ ಹಾಗೂ ಹೋಸೂರಿನ ತಳಿ ಗಜ ನ ಜೊತೆ ಸೇರಿ ಟೀಂ ಬಿಲ್ಡ್ ಮಾಡ್ತಿದ್ದನಂತೆ.
ಜೈಲಿನಿಂದ ಬಂದು ಹವಾ ಹೆಚ್ಚಿಸಿಕೊಳ್ಳು ಮತ್ತು ಕೊಲೆಗೆ ಸ್ಕೇಚ್ ರೆಡಿ ಮಾಡಿದ್ದಾನೆಂದು ಪೊಲೀಸ್ರಿಗೆ ಮಾಹಿತಿ ಸಿಕ್ಕಿದೆ. ಇನ್ನೂ ಈ ರೀತಿ ರಾಜಾರೋಷವಾಗಿ ವಿಡಿಯೋ ಮಾಡಿ ಕುಕೃತ್ಯಕ್ಕೆ ಅಣಿಯಾಗ್ತಿರೋ ಮಹೇಶನ ಹಿಂದೆ ಸಿಸಿಬಿ ಪೊಲೀಸ್ರು ಬಿದ್ದಿದ್ದಾರೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್