ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಯುಧಪೂಜೆಗೆ ಖರೀದಿ ಭರಾಟೆ ಜೋರಾಗಿ ಇದೆ.ಕೆ.ಆರ್.ಮಾರ್ಕೆಟ್ ನಲ್ಲಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದವರಿಗೆ ತಟ್ಟಿದ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ. ಈ ಬಾರಿ ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರ ಗಗನಕ್ಕೇರಿದೆ.
ಗಗನಕ್ಕೇರಿದ ಹೂಗಳ ದರ(ಕೆಜಿಗೆ)
- ಮಲ್ಲಿಗೆ-ಕೆಜಿಗೆ 1000 ರಿಂದ 1200 ರೂ.
- ಸೇವಂತಿಗೆ- 300 ರಿಂದ 500 ರೂ.
- ಗುಲಾಬಿ-200 ರಿಂದ 309 ರೂ.
- ಕನಕಾಂಬರ-1100 ದಿಂದ 1300 ರೂ.
- ಮಳ್ಳೆ ಹೂವು-800 ರಿಂದ 1000 ರೂ.
ಹಣ್ಣುಗಳ ದರವೂ ದುಬಾರಿ
- ಏಲಕ್ಕಿ ಬಾಳೆ :120 ರಿಂದ 140 ರೂ.
- ಅನಾನಸ್ :40 ರಿಂದ 70 ರೂ.
- ದಾಳಿಂಬೆ – 100 ರಿಂದ 150 ರೂ.
- ಸೇಬು -180 ರಿಂದ 350 ರೂ.
ಕಳೆದ ಬಾರಿಗಿಂತ ಈ ಬಾರಿ ಬೂದು ಕುಂಬಳಕಾಯಿ ದರ ಏರಿಕೆಯಾಗಿದ್ದು, ಕೆಜಿಗೆ 30ರೂ ಇದ್ದ ಬೂದುಗುಂಬಳಕಾಯಿ ಈಗ ಕೆಜಿಗೆ 150ರಿಂದ 200ರೂಪಾಯಿ ಏರಿಕೆಯಾಗಿದೆ. ತಮಿಳುನಾಡು, ಆಂಧ್ರಪ್ರದೇಶದಿಂದ ನಗರಕ್ಕೆ ಬೂದು ಕುಂಬಳಕಾಯಿ ಬರ್ತಿದೆ. ಈ ಬಾರಿ ಮಳೆ ಇಲ್ಲದೆ, ಇಳುವರಿ ಕಡಿಮೆಯಾಗಿದ್ದರಿಂದ ದರ ಏರಿಕೆಯಾಗಿದೆ.