ಬೆಂಗಳೂರು: ಸಿಲಿಕಾನ್ ಸಿಟಿ ವಾಯು ಮಾಲಿನ್ಯದಿಂದಾಗಿ ಇದೀಗ ಮತ್ತಷ್ಟು ಫೇಮಸ್ ಆಗ್ತಿದೆ. ಬೆಂಗಳೂರಿಗರು ಬೆಂಗಳೂರಿನಲ್ಲಿ ಎಷ್ಟು ಸೇಫ್ ಆಗಿದ್ದಾರೆ ಅನ್ನೋದೇ ಇದೀಗ ಒಂದು ಕ್ವೇಷನ್ ಮಾರ್ಕ್. ಈ ಹಿನ್ನೆಲೆ ಸಿಟಿ ಜನರನ್ನ ಅಲಟ್೯ ಮಾಡೋಕೆ ಡಿಫರೆಂಟ್ ಆಗಿ ಪ್ಲಾನ್ ಮಾಡಿದ್ದಾರೆ. ಹಾಗಾದ್ರೆ ಏನದು ಪ್ಲಾನ್ ತೋರಿಸ್ತೀವಿ ನೋಡಿ..
ರಾಜಧಾನಿಯಲ್ಲಿ ದಿನೇ ದಿನೇ ಧೂಳು, ಹೊಗೆ ಪ್ರಮಾಣ ಜಾಸ್ತಿಯಾಗ್ತಾಯಿದೆ. ಹೆಚ್ಚುತ್ತಿರುವ ವಾಹನ ದಟ್ಟಣೆ, ಫ್ಯಾಕ್ಟರಿಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಮತ್ತೊಂದು ದೆಹಲಿ ಆಗುವತ್ತ ಹೊರಟಿದೆ. ರಸ್ತೆಯ ಧೂಳು, ಕಾಮಗಾರಿ ಕಟ್ಟಡಗಳಿಂದ ಮಾಲಿನ್ಯ ಪ್ರಮಾಣ ಹೆಚ್ಚಳ ವಾಗ್ತಾಯಿದೆ.
ಇತ್ತಿಚಿನ ದಿನಗಳಲ್ಲಿ ವಾಹನಗಳಿಂದ ನಗರದಲ್ಲಿ ವಿಪರೀತ ವಾಯುಮಲಿನ್ಯ ಹೆಚ್ಚಾಗಿದೆ. ವಾಹನಗಳು ಹೋರಸೂಸವ ಹೊಗೆಯಲ್ಲಿ ಕಾರ್ಬನ್ ಡೈ ಆಕ್ಸೈಡ್, ಸಲ್ಫರ್ ಟೈ ಆಕ್ಸೈಡ್ ನೈಟ್ರೋಜನ್ ಆಕ್ಸೈಡ್ನಂತ ಕಲುಷಿತ ಆಂಶಗಳು ಮಿಶ್ರಣಗೊಂಡು ದೇಹದ ಆರೋಗ್ಯವನ್ನು ನಾಶ ಮಾಡುತ್ತಿದೆ. ಈ ಹಿನ್ನೆಲೆ ಕರ್ನಾಟಕ ಸರ್ಕಾರದ ವಾಯುಮಾಲಿನ್ಯ ಇಲಾಖೆ ಜನರಿಗೆ ಮುಂದೆ ನಡೆಯುವ ದುಷ್ಪರಿಣಾಮದ ಬಗ್ಗೆ ವ್ಯಂಗ್ಯಚಿತ್ರ ಪ್ರದರ್ಶನದ ಮೂಲಕ ಅರಿವು ಮೂಡಿಸಲು ಪ್ರಯತ್ನ ಮಾಡಲಾಗಿದೆ. ಚಿತ್ರಕಲಾ ಪರಿಷತ್ ನಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿತ್ತು.
ಒಟ್ನನಲ್ಲಿ ಚಿತ್ರಕಲಾ ಪರಷತ್ ನಲ್ಲಿ ನಡೆದ ಅರಿವು ಮೂಡಿಸುವ ವ್ಯಂಗ್ಯ ಚಿತ್ರ ಪ್ರದಶನ ಅರಿವಿನ ಜೋತೆಗೆ ವ್ಯಂಗ್ಯ ಚಿತ್ರಗಳು ಜನರ ಮನ ಸೆಳೆಯುತಿತ್ತು.
ವರದಿ: ಹರ್ಷಿತಾ ಪಾಟೀಲ್