ಬೆಂಗಳೂರು: ಹಸುಗೂಸುಗಳು ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಹತ್ತು ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ.
ವಿಚಾರಣೆ ವೇಳೆ 6 ವರ್ಷಗಳಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟದ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಅದರಲ್ಲಿ ಕರ್ನಾಟಕದಲ್ಲಿ ಕೇವಲ 50-60 ಮಕ್ಕಳನ್ನು ಮಾರಾಟ ಮಾಡಿದ್ದು,ಉಳಿದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟವನ್ನು ಆರೋಪಿಗಳು ಮಾಡಿದ್ದಾರೆ. ಸದ್ಯ ಕರ್ನಾಟಕದಲ್ಲಿ ಮಾರಾಟ ಆಗಿರೋ ಮಕ್ಕಳ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಹತ್ತು ಮಕ್ಕಳ ಬಗ್ಗೆ ಮಾತ್ರ ಸಿಸಿಬಿಗೆ ಮಾಹಿತಿ ಸಿಕ್ಕಿದ್ದು, ಉಳಿದ ಮಕ್ಕಳನ್ನು ಯಾರಿಗೆ ಕೊಟ್ಟಿದ್ದಾರೆ ಅಂತ ತನಿಖೆ ನಡೆಸಿದ್ದಾರೆ. ಆರೋಪಿ ಮಹಾಲಕ್ಷ್ಮಿ ಯ ಇತಿಹಾಸ ಮಾತ್ರ ಬಗೆದಷ್ಟು ಬಯಲಾಗುತ್ತಿದೆ.ಆರಂಭದಲ್ಲಿ ಮನೆ ಕೆಲಸ ಮಹಾಲಕ್ಷ್ಮಿಮಾಡಿಕೊಂಡಿದ್ದ. ಈಗ ಕೋಟಿ, ಕೋಟಿ ಹಣ, ಕಾರು ಬಂಗಲೆಯನ್ನ ಮಾಡಿದ್ದಾಳೆ ಎಂದು ತಿಳಿದುಬಂದಿದೆ.