ಅಮರನಾಥ : ಪವಿತ್ರ ಅಮರನಾಥ ಯಾತ್ರ ಸ್ಥಳದಲ್ಲಿ ಹವಾಮಾನ ವೈಪರೀತ್ಯ ಹಿನ್ನೆಲೆ ಹಠಾತ್ತನೆ ಸ್ಥಗಿತಗೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹವಾಮಾನ ವೈಪರೀತ್ಯದಿಂದ ನಿರಂತರವಾಗಿ ಹಿಮ ಮತ್ತು ಮಳೆ ಬೀಳುತ್ತಿದೆ. ಅಲ್ಲದೇ ಇನ್ನೆರಡು ದಿನ ಮಳೆಯಾಗುವ ಮುನ್ಸೂಚನೆ ಇದ್ದು, ಈ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಗೆ ಅನುಕೂಲಕರ ವಾತಾವರಣ ಇಲ್ಲದ ಕಾರಣ ಅಧಿಕಾರಿಗಳು ಯಾತ್ರೆಯನ್ನು ಸ್ಥಗಿತಗೊಳಿಸಿರುವುದಾಗಿ ಮಾಹಿತಿ ದೊರಕಿದೆ.
ಹೌದು, 62 ದಿನಗಳ ಪವಿತ್ರ ಅಮರನಾಥ ಯಾತ್ರೆಯು ಜುಲೈ 1 ರಂದು ಪ್ರಾರಂಭವಾಗಿದ್ದು, ಹಿಮಾಲಯದ ಎತ್ತರದ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗದ ದರ್ಶನ ಪಡೆಯಲು ಲಕ್ಷಾಂತರ ಯಾತ್ರಿಕರು ಬರುತ್ತಾರೆ. ಈ ಪ್ರವಾಸದ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 17 ರಂದು ಪ್ರಾರಂಭವಾಗಿತ್ತು. ಇದೇ ಕಾರಣಕ್ಕೆ ಶಿವಲಿಂಗದ ದರ್ಶನಕ್ಕೆ ತೆರಳಿದ ಅನೇಕ ಕನ್ನಡಿಗರು ಇದೀಗ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಯಾತ್ರೆಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ರಕ್ಷಣೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಎಲ್ಲರನ್ನು ರಕ್ಷಿಸಿ, ಸುರಕ್ಷಿತವಾಗಿ ಕರುನಾಡಿಗೆ ಮರಳಲು ಅಗತ್ಯವಿರುವ ಎಲ್ಲಾ ನೆರವನ್ನು ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದು, ಗದಗ್ ನಿಂದ 23 ಮಂದಿ ಸೇರಿ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಯಾತ್ರೆಗೆ ತೆರೆಳಿರುತ್ತಾರೆ. ಇವರು ಅಮರನಾಥ ಮಂದಿರದಿಂದ 6 km ದೂರದಲ್ಲಿರುವ ಪಂಚತಾರ್ನಿ ಟೆಂಟ್ ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆ. ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ. ನೀಡಿದ್ದಾರೆ.