ಬೆಂಗಳೂರಿ (Bangalore) ನಲ್ಲಿ ವಾರ ಕಳೆದರೂ ಸರ್ಕಾರ ಸ್ಪಂದಿಸದಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 8 ದಿನದಿಂದ ಫ್ರೀಡಂಪಾರ್ಕ್ (Freedom park) ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಕ್ಕೆ ಇಂದು ಸಂಜೆಯವರೆಗೆ ಡೆಡ್ ಲೈನ್ ನೀಡಿದ್ದಾರೆ.
ಇದೇ ವೇಳೆ ಫೆಬ್ರವರಿ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) ಅವರ ನಿವಾಸ ಚಲೋ ಕೈಗೊಳ್ಳಲಾಗುವುದು. ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ 10 ದಿನ ಗಡುವು ನೀಡಿದ್ದೆವು. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸಲು ಸಮಯಾವಕಾಶ ಸಿಕ್ಕಿಲ್ಲ .ಬೇಡಿಕೆಗಳು ಆದೇಶವಾಗಿ ಹೊರಬೀಳದಿದ್ದರೆ ನಾಳೆ ಸಿಎಂ ಮನೆ ಮುತ್ತಿಗೆ ಫಿಕ್ಸ್ ಆಗಿದೆ. ಲಾಠಿ ಚಾರ್ಜ್, ಗೋಲಿಬಾರ್ ಆದ್ರೂ ನಾವು ಸುಮ್ಮನಿರೋದಿಲ್ಲ. ಯಾವತ್ತೋ ಒಂದು ದಿನ ಸಾಯಬೇಕು, ನಾಳೆಯೇ ಸತ್ತರೆ ಏನೂ ಆಗೊಲ್ಲ. ಸತತ 9 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ. ನಮ್ಮ ಹೋರಾಟದ ಕೂಗು ಸರ್ಕಾರದ ಕಿವಿಗೆ ಬಿದ್ದಿಲ್ಲ . ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಆಗಬೇಕು. ಇಲ್ಲವಾದ್ರೆ ನಾಳೆ 15 ಸಾವಿರ ಅಂಗನವಾಡಿ ಕಾರ್ಯಕರ್ತೆ (Anganwadi teachers) ಯರು ಸಿಎಂ ಮನೆ ಮುತ್ತಿಗೆ ಹಾಕ್ತೀವಿ ಎಂದು ಸಿಐಟಿಯು ಸಂಘಟನೆಯ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಹೇಳಿದ್ದಾರೆ.
ಇದನ್ನು ಓದಿ :- ಜಾರಕಿಹೊಳಿ ಆರೋಪಗಳಿಗೆ ಅಧ್ಯಕ್ಷರೇ ಉತ್ತರ ಕೊಡುತ್ತಾರೆ – ಎಂ.ಬಿ ಪಾಟೀಲ್