ಕಲಬುರಗಿ : ರಾಷ್ಟ್ರಪತಿ ಬಗ್ಗೆ ಸಿಎಂ ಸಿದ್ರಾಮಯ್ಯ ಏಕವಚನದಲ್ಲಿ ಮಾತಾಡಬಾರ್ದು ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ವಿಜಯೇಂದ್ರ ಈ ರೀತಿಯ ಯಾರು ನಿರೀಕ್ಷೆ ಮಾಡಲ್ಲ ಮುಖ್ಯಮಂತ್ರಿ ಬಾಯಿಂದ ಈ ಪದ ಯಾಕೆ ಹೊರಡ್ತು ಅನ್ನೋದು ಆಶ್ಚರ್ಯ ಅಂದ್ರು. ರಾಷ್ಟ್ರಪತಿ ಸ್ಥಾನಕ್ಕೆ ಸಿದ್ದರಾಮಯ್ಯ ಅಗೌರವ ತೋರಿಸ್ತಿದ್ದಾರೆ ಇದೊಂದು ಅಕ್ಷಮ್ಯ ಅಪರಾಧ.
ಈ ವಿಚಾರ ಸಿಎಂ ಅಷ್ಟೇ ಅಲ್ಲ ಕಾಂಗ್ರೆಸ್ ನ ಎಲ್ಲರಿಗೂ ನೋವು ಕಾಡ್ತಿದೆ. ಇದು ಬಾಯಿ ತಪ್ಪಿ ಬಂದಿದೆ ಅಂತಾ ನನಗೆ ಅನ್ನಿಸ್ತಿಲ್ಲ ಅವರ ಮನಸ್ಸಲ್ಲಿರುವ ಭಾವನೆ ವ್ಯಕ್ತಪಡಿಸಿದ್ದಾರೆ ಅಂತಾ ಅನ್ಸುತ್ತೆ ಅಂತ ಹೇಳಿದರು.