ಸಿಎಂ ಸಿದ್ದರಾಮಯ್ಯ ಆಪ್ತರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ.ದೆಹಲಿ ಅಂಗಳದಲ್ಲಿ ಸಚಿವ ಸಂಪುಟ ಕಸರತ್ತಿನಲ್ಲಿ ಸಿದ್ದರಾಮಯ್ಯ,ಡಿಕೆಶಿವಕುಮಾರ್ ಒಂದು ಒಂದು ಪಟ್ಟಿ ತೆಗೆದುಕೊಂಡು ಹೋಗಿದ್ರು,ಇಬ್ಬರೂ ನಾಯಕರ ಬಣದವರಿಗೂ ಹೈ ಕಮಾಂಡ್ ಸಚಿವ ಸ್ಥಾನ ಕೊಡಲು ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಅವರ ಆಪ್ತ ಬಳಗಕ್ಕೆ ಹೆಚ್ಚಿನ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯ ಬಣದಲ್ಲಿರುವ ನಾಯಕರು..! ಸಂತೋಷ ಲಾಡ್, ಕೆ ಎನ್ ರಾಜಣ್ಣ,ಬೈರತಿ ಸುರೇಶ್,
ಪುಟ್ಟರಂಗಶೆಟ್ಟಿ,ವೆಂಕಟೇಶ್, ಕೃಷ್ಣ ಬೈರೆಗೌಡ,ಬಸವರಾಜ ರಾಯರೆಡ್ಡಿ, ಎಚ್ ಸಿ ಮಹದೇವಪ್ಪ,ಎಂ ಕೃಷ್ಣಪ್ಪ,ಈಶ್ವರ್ ಖಂಡ್ರೆ,ರಹೀಂ ಖಾನ್ ,ಜಮೀರ್ ಅಹ್ಮದ್ ಖಾನ್ ,ಎಂ ಬಿ ಪಾಟೀಲ್,ಶಿವರಾಜ್ ತಂಗಡಗಿ
ಡಿಕೆಶಿ ಬಣದ ಶಾಸಕರಿಗೂ ಮಂತ್ರಿ ಗಿರಿ, ಚೆಲುವರಾಯಸ್ವಾಮಿ, ಎಂ ಸಿ ಸುಧಾಕರ್, ಮಧು ಬಂಗಾರಪ್ಪ,ಮಂಕಾಳ ವೈದ್ಯ,ಲಕ್ಷೀ ಹೆಬ್ಬಾಳ್ಕರ್. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟೀಕೆಟ್ ಹಂಚಿಕೆಯಲ್ಲಿಯೂ ಸಿದ್ದರಾಮಯ್ಯ ಅವರದೆ ಮೇಲುಗೈ ಆಗಿತ್ತು.ಈಗಾ ಸಚಿವ ಸ್ಥಾನ ಕೊಡಿಸುವಲ್ಲಿಯೂ ಸಿದ್ದರಾಮಯ್ಯ ಆಪ್ತರಿಗೆ ಹೆಚ್ಚಿನ ಸಚಿವ ಸ್ಥಾನ ಸಿಕ್ಕಿದೆ.ಇದರಿಂದ ಡಿಕೆಶಿವಕುಮಾರ್ ಬಣಕ್ಕೆ ಅಸಮಧಾನವಾಗಿದೆ.
ವರದಿ : ಬಸವರಾಜ ಹೂಗಾರ