ಬೆಂಗಳೂರು ; ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಈಡೇರಿಕೆ ಸಂಬಂಧದಲ್ಲಿ ನಾಳೆ ಮೇ.31 ಎಲ್ಲಾ ನೂತನ ಸಚಿವರುಗಳೊಂದಿಗೆ ಸಭೆ ನಡೆಯಲಿದೆ. ಸಿದ್ದು ಸರ್ಕಾರದ ನೂತನ ಸಚಿವ ಸಂಪುಟದ ಮೊದಲ ಸಭೆಯಲ್ಲಿ ಮಹತ್ತರ ತೀರ್ಮಾನಗಳನ್ನ ಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ..
ಈಗಾಗಲೇ ಸರ್ಕಾರದ ಆರ್ಥಿಕ ಪರಿಸ್ಥಿಯ ಅವಲೋಕನ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂಬಂಧದಲ್ಲಿ ವರದಿಯನ್ನು ಸಹ ತರಿಸಿಕೊಂಡಿದ್ದಾರೆ.
ಸರ್ಕಾರ ನೀಡಿರುವ ಗ್ಯಾರಂಟಿಗಳ ಸಂಬಂಧದಲ್ಲಿ ಬರಲಿರುವ ಆರ್ಥಿಕ ಹೊರೆ, ಅದರ ಸುಧಾರಣೆ, ಹಾಗೂ ಯಾವುದೇ ಭ್ರಷ್ಟಾಚಾರ ನಡೆಯದಂತೆ ಎಚ್ಚರ ವಹಿಸುವ ಮೂಲಕ ಸಚಿವರುಗಳು ಕಾರ್ಯನಿರ್ವಹಿಸಬೇಕೆಂಬ ಸಿದ್ದು ಮೌಖಿಕ ಆರ್ಡರ್ ಸಹ ಸಭೆಯಲ್ಲಿ ಪ್ರಸ್ಥಾಪ ಆಗಲಿದೆ ಎಂದು ಗೊತ್ತಾಗಿದೆ.