ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 140 ದಿನ ಪೂರೈಸಿದೆ. ಆದರೆ ಬಜೆಟನ್ ನಲ್ಲಿ 2,50,993 ಕೋಟಿ ರೂ ಬಿಡುಗಡೆಯಾಗಿದೆ.
ಆದ್ರೂ ಕೂಡ ರಾಜ್ಯ ಸರ್ಕಾರ ಇನ್ನೂ ಟೇಕ್ ಆಫ್ ಅಗಿಲ್ಲ. ಹೀಗಾಗಿ ಇದು ಶಾಸಕರು ಮತ್ತು ಸಚಿವರು ಅಸಮಾಧಾನಕ್ಕೆ ಕಾರಣವಾಗಿದೆ. ಗ್ಯಾರಂಟಿ ಸರ್ಕಾರದಲ್ಲಿ ಅಭಿವೃದ್ಧಿಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ. ಗ್ಯಾರಂಟಿಗೆ ಜೈ ಎಂದು ಹೇಳಲಾಗಿದ್ದರೂ ಅಭಿವೃದ್ಧಿಗೆ ಬೈ ಬೈ ಮಾಡಲಾಗಿದೆ ಎಂಬ ಸಂಗತಿ ಅಂಕಿ-ಅಂಶಗಳಿಂದ ಗೊತ್ತಾಗಿದೆ.ಹೊಸ ಸರ್ಕಾರ ಎಷ್ಟು ಹೊಸ ಕೆಲಸ ಶುರು ಮಾಡಿದೆ?ಹೊಸ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದೆಯಾ?ಹಳೇ ಬಿಲ್ ಅನ್ನು ಪಾವತಿ ಮಾಡಲಾಗಿದೆಯೇ? ಗ್ಯಾರಂಟಿ ಸರ್ಕಾರದಲ್ಲಿ ಶಾಸಕರಿಗೆ ಸಿಕ್ಕಿರುವ ಗ್ಯಾರಂಟಿ ಏನು? ಎಂಬ ಪ್ರಶ್ನೆ ಮೂಡಿದೆ. ಸಿಎಂ ಸಿದ್ದರಾಮಯ್ಯ ಅವರು 2,50.993 ಕೋಟಿ ರೂಪಾಯಿಗಳ ಬಜೆಟ್ ಅನ್ನು ಘೋಷಣೆ ಮಾಡಲಾಗಿದೆ. 2024ರ ಫೆಬ್ರುವರಿಗೂ ಈ ಬಜೆಟ್ ಚಾಲ್ತಿಯಲ್ಲಿರಲಿದೆ.ಈ ಬಜೆಟ್‌ಗೆ ಇನ್ನು ಐದು ತಿಂಗಳು ಮಾತ್ರ ಬಾಕಿ ಇದೆ.ಐದು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ರೂಪಾಯಿಯನ್ನು ಸಿಎಂ ಮೀಸಲಿಟ್ಟಿದ್ದಾರೆ.
ಮೀಸಲಿಟ್ಟ ಹಣ ಎಷ್ಟು?
37,587 ಕೋಟಿ ರೂ. ಶಿಕ್ಷಣಕ್ಕೆ ಮೀಸಲು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 24166 ರೂ.
ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8409 ಕೋಟಿ ರೂ.
ನಮ್ಮ ಮೇಟ್ರೋ ಯೋಜನೆಗೆ 30 ಸಾವಿರ ಕೋಟಿ ರೂ.
ಸಣ್ಣ ನೀರಾವರಿಗೆ 799 ಕೋಟಿ ರೂ. (ಕೆರೆ ತುಂಬಿಸಲು)
ಲೋಕೋಪಯೋಗಿಗೆ – 10133 ಕೋಟಿ ರೂ.
ಕೆಸಿ ವ್ಯಾಲಿ-ಎಚ್.ಎನ್. ವ್ಯಾಲಿ – 529 ಕೋಟಿ ರೂ. (296 ಕೆರೆ)
ಅನ್ನಭಾಗ್ಯ 10275 ಕೋಟಿ ರೂ. ಮೀಸಲು
ಸಾರಿಗೆ 4000 ಕೋಟಿ ರೂ. ಮೀಸಲು
ಸಹಕಾರ ಇಲಾಖೆಗೆ 20 ಸಾವಿರ ಕೋಟಿ ರೂ.
ಇನ್ನೂ ಆಗದ ಅನುಷ್ಠಾನ
ಬಜೆಟ್ ಮಂಡನೆ ಮಾಡಿ ಐದು ತಿಂಗಳು ಮುಗಿದರೂ ಅನುಷ್ಠಾನ ಮಾತ್ರ ಇಲ್ಲ.ಕೇವಲ ಚಾಲ್ತಿಯಲ್ಲಿ ಇರುವ ಯೋಜನೆಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ, ಜಲ ಸಂಪನ್ಮೂಲ, ಬೆಂಗಳೂರು ಅಭಿವೃದ್ಧಿಗೆ ಅನುದಾನದ ಕೊರತೆ ಎದುರು.ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆಯಾದರೂ ತೀವ್ರ ಕಡಿಮೆ ಅನುದಾನವನ್ನು ನೀಡಲಾಗಿದೆ. ಕೃಷಿಯ ಹೊಸ ಯೋಜನೆಗಳಿಗೆ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ಸರ್ಕಾರ ಬಂದ ಬಳಿಕ ಒಂದು ಟೆಂಡರ್ ಸಹ ಅನುಮೋದನೆಗೊಂಡಿಲ್ಲ.ಶಾಸಕರ ವಿಶೇಷ ಅನುದಾನಕ್ಕೆ ಬೇಡಿಕೆ ಬಂದಿದ್ದರೂ ಇನ್ನೂ ಆಗಿಲ್ಲ.ಲೋಕೋಪಯೋಗಿ, ಸಾರಿಗೆ, ಪಂಚಾಯತ್ ರಾಜ್, ಆರೋಗ್ಯ ಮತ್ತು ಶಿಕ್ಷಣಕ್ಕೆ ಮಾತ್ರ ಅನುದಾನ ನೀಡಲಾಗಿದೆ.ಈ ಇಲಾಖೆಗಳ ಅಡಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿ ಇರುವ ಕೆಲಸಕ್ಕೆ ಮಾತ್ರ ಅನುದಾನ ನೀಡಲಾಗಿದ್ದು, ಹೊಸ ಕಾಮಗಾರಿಗಳಿಗೆ ಹಣ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅನುದಾನ ಕೇಳಿದ ಶಾಸಕರಿಗೆ ಸಿಎಂ ಹೇಳಿದ್ದೇನು?
ಯಾವ ಇಲಾಖೆಗೆ ಎಷ್ಟು ಹಣ ಬಿಡಗಡೆ?ಬೆಂಗಳೂರು ಅಭಿವೃದ್ಧಿ ಅಡಿಯಲ್ಲಿ ಯಾವುದೇ ಹೊಸ ಕಾಮಗಾರಿ ಆಗಿಲ್ಲ.2023ರ ಮೇ ತಿಂಗಳಿಂದ ಇಂದಿನವರೆಗೂ 650 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಹಳೇ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳನ್ನು ಮುಂದುವರಿಕೆ ಮಾಡಲಾಗಿದೆ.ಬಿಲ್ ನೋಡಿ ಕ್ಲಿಯರ್ ಹಳೇ ಬಾಕಿ 650 ಕೋಟಿ ರೂಪಾಯಿಯನ್ನು ಸರ್ಕಾರ ಕ್ಲಿಯರ್ .ಜಲ ಸಂಪನ್ಮೂಲ ಇಲಾಖೆಗೆ ಇಲ್ಲಿಯವರೆಗೂ 4200 ಕೋಟಿ ರೂ. ಬಿಡುಗಡೆಯಾಗಿದ್ದು, ಸಣ್ಣ ನೀರಾವರಿ ಯೋಜನೆಗೆ 500 ಕೋಟಿ ರೂ. ಬಿಡುಗಡೆ .ಹೊಸ ಸರ್ಕಾರದಲ್ಲಿ ಟೆಂಡರ್ ಆಗಿಲ್ಲ. ಮೇ ತಿಂಗಳಿಂದ ಆದ ಕೆಲಸಗಳಿಗೆ ಹಣ ಬಿಡುಗಡೆ .ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಆಗಿಲ್ಲ ಹೊಸ ಟೆಂಡರ್ ಹಾಕಲಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 1000 ಕೋಟಿ ರೂ. ಬಿಡುಗಡೆ . ಯಾವುದೇ ಹೊಸ ಟೆಂಡರ್ ಆಗಿಲ್ಲ.
ಹಳೇ ಬಿಲ್ ಕ್ಲಿಯರ್ ಮಾಡಲಾಗುತ್ತಿದೆ.ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 1500 ಕೋಟಿ ರೂ. ಅನುದಾನ ಬಿಡುಗಡೆ .ಕೃಷಿ ಇಲಾಖೆಯ ನಡೆಯುತ್ತಿರುವ ಕೆಲಸಗಳಿಗೆ ಅನುದಾನ ಬಿಡುಗಡೆ . ಕೃಷಿ ಹೊಂಡ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗಿಲ್ಲ.ಲೋಕೋಪಯೋಗಿ ಇಲಾಖೆಗೆ ಮೀಸಲಿಟ್ಟ ಹಣ 10133 ಕೋಟಿ ರೂಪಾಯಿಯಾಗಿದೆ.ಇದರಲ್ಲಿ 5000 ಸಾವಿರ ಕೋಟಿ ರೂಪಾಯಿಯನ್ನು ಬಿಡುಗಡೆಯಾಗಿದೆ. ಆದರೆ ಎರಡು ಕಾಮಗಾರಿಗಳಿಗೆ ಕ್ಯಾಬಿನೆಟ್ ಅನುಮೋದನೆ ಸಿಕ್ಕಿದೆ. ಕೆಲಸ ಪೂರ್ತಿ ಆಗಿರುವುದಕ್ಕೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ.ಈ ಇಲಾಖೆಯಲ್ಲೂ ಇನ್ನೂ ಹೊಸ ಟೆಂಡರ್ ಆಗಿಲ್ಲ. ಪಂಚಾಯತ್ ರಾಜ್ ಇಲಾಖೆಯಲ್ಲೂ ಹೊಸ ಟೆಂಡರ್ ಆಗಿಲ್ಲ. 6000 ಕೋಟಿ ರೂಪಾಯಿ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.