ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನೆಚ್ಚಿನ ನಾಯಕರು ಹಾಗೂ ವಿಶ್ವಮಾನ್ಯ ನಾಯಕ ನರೇಂದ್ರ ಮೋದಿ ಸರ್ಕಾರ 9 ವರ್ಷ ಪೂರ್ಣಗೊಳಿಸಿದೆ. 9 ವರ್ಷ ರಾಷ್ಟ್ರದಲ್ಲಿ ಬಹಳಷ್ಟು ಬೆಳವಣಿಗೆ, ಬದಲಾವಣೆ ಆಗಿದೆ. ದೇಶವು ಬಹಳ ಕ್ಷೇತ್ರಗಳಲ್ಲಿ ಮುನ್ನಡೆದಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲೂ ಬಹಳ ದೊಡ್ಡ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬದಲಾವಣೆ- ಉನ್ನತೀಕರಣ ಆಗಿದೆ ಎಂದು ಪ್ರಧಾನಿ ಮೋದಿ ಬಗ್ಗೆ ಹಾಡಿ ಹೊಗಳಿದ್ರು….
ಇನ್ನೂ ಉಚಿತ ಕೊಡುಗೆ ವಿಚಾರವಾಗಿ ಸಚಿವರ ಷರತ್ತು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬೊಮ್ಮಾಯಿ, ಹಲವು ಸಚಿವರ ಹೇಳಿಕೆ ನೋಡಿದರೆ ಅವರು ಹೇಳೋದು ಒಂದು, ಮಾಡೋದು ಒಂದು. ಚುನಾವಣೆ ಮೊದಲು ಎಲ್ಲರಿಗೂ ಫ್ರೀ. ನನಗೂ ಫ್ರೀ, ನಿನಗೂ ಫ್ರೀ ಅಂತ ಹೇಳಿದ್ದರು.
ಈಗ ಕರ್ನಾಟಕ ಜನತೆಗೆ ದೋಖಾ ಮಾಡಿದ್ದಾರೆ. ಈ ಗ್ಯಾರಂಟಿ ಬಗ್ಗೆ ಅವರು ಜಾರಿಗೆ ತರಬೇಕು. ಹಿಂದಿನ ಸರ್ಕಾರ ಬಗ್ಗೆ ಆರೋಪ ಅಂತ ಹೇಳಿದಾಗ, ಇವರಿಗೆ ಜನ ಮತ ಹಾಕಿದ್ದಾರೆ. ಹಿಂದೆ ಸುಳ್ಳು ಹೇಳಿದಾಗ ಮನೆಗೆ ಕಳಿಸಿದ್ದರು, ಈಗ ನಮ್ಮನ್ನೂ ಕಳಿಸಿದ್ದಾರೆ. ಆದರೆ ಕರ್ನಾಟಕದ ಜನತೆಗೆ ಇವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಗುಡುಗಿದ್ರು….