ರಾಯಚೂರು: ಅಲ್ಲಿ ಸಾವಿರಾರು ಜನ ಸಂಖ್ಯೆ ಓಡಾಡುವ ಸ್ಥಳ . ಆದರೆ ಒಂದು ಜಾಗಕ್ಕೆ ಎರಡು ಸಮುದಾಯದ ನಡುವೆ ವಾಗ್ವಾದ ನಡೆಯಿತ್ತು. ಅವರು ಜೈ ಶ್ರೀ ರಾಮ್ ಎಂದು ಘೋಷಣೆ . ಇದರಿಂದ ಮಧ್ಯದಲ್ಲಿ ಪೋಲಿಸರ ಎಂಟ್ರಿ ಗೆ ಸೈಲೆಂಟ್ ಆದರೂ . ಆದರೆ ಅಧಿಕಾರಿಗಳಿಗೆ ಮಾತ್ರ ತೆಲೆನೋವು ಆಗಿದೆ.
ಬಿಸಿಲುನಾಡು ರಾಯಚೂರು ಇಂದು ಅಕ್ಷರಶಃ ಕಾದ ಹೆಂಚಿನಂತಾಗಿತ್ತು..ರಾಯಚೂರು ನಗರದ ತೀ ನ್ ಕಂದೀಲ್ ಸರ್ಕಲ್ ಬಳಿಯನ ಹಜರತ್ ಸಯ್ಯದ್ ಶಾಹ ಅಲ್ಲಾವುದ್ದಿನ್ ದರ್ಗಾದ ಎದುರು ಕಮಾನ್ ನಿರ್ಮಿಸಲಾಗ್ತಿದೆ. ಅದರ ಕಾಮಗಾರಿ ಈಗಾಗಲೇ ಆರಂಭವಾಗಿದೆ..ಆದ್ರೆ ಇದೇ ದರ್ಗಾದ ಕಮಾನ್ ವಿಚಾರ ಈಗ ಧರ್ಮ ದಂಗಲ್ಗೆ ಕಾರಣವಾಗಿದೆ.
ಹೌದು, ದರ್ಗಾದ ಕಮಾಲ್ ನಿರ್ಮಿಸುತ್ತಿರೊ ಪ್ರದೇಶದ ಬಳಿ ಐತಿಹಾಸಿಕ ರಾಯಚೂರು ಕೋಟೆ ಇದೆ..ಕರ್ನಾಟಕ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವದ ಸ್ಥಳಗಳು,ಅವಶೇಷಗಳ ಕಾಯ್ದೆಯಡಿ ಆಯಾ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ..ಅಷ್ಟೇ ಅಲ್ಲದೇ 200 ಮೀಟರ್ ಪ್ರದೇಶ ನಿಯಂತ್ರಿತ ಪ್ರದೇಶವಾಗಿರುತ್ತಿದೆ..ಹೀಗಾಗಿ ಈ ಕಮಾನ್ ನಿರ್ಮಿಸುತ್ತಿರೋದು ಕಾನೂನು ಬಾಹಿರ..ಕೂಡಲೇ ಕಮಾನ್ ಕಾಮಗಾರಿ ನಿಲ್ಲಿಸಬೇಕು ಅಂತ ಒತ್ತಾಯಿಸಿ ಕಮಾನ್ ನಿರ್ಮಾಣವಾಗ್ತಿರೋ ಸ್ಪಾಟ್ಗೆ ತೆರಳಿದ್ರು..ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೀತು.ಒಂದು ಕಡೆ ಜೈ ಶ್ರೀರಾಂ ಘೋಷಣೆ ಕೂಗಿದ್ರೆ ಮತ್ತೊಂದು ಬಣ ಇದಕ್ಕೆ ವಿರೋಧ ವ್ಯಕ್ತಪಡಿಸ್ತು..ನಂತರ ಬಿಜೆಪಿ ನಿಯೋಗ ನಗರಸಭೆ ಕಮಿಷನರ್ ದುರು ಸಿದ್ದಯ್ಯಸ್ವಾಮಿ ಅವ್ರಿಗೆ ದೂರು ನೀಡಿದ್ರು.
ಇತ್ತ ಈಗಾಗಲೇ ಹಲವು ಬಾರೀ ಕಮಾನ್ ನಿರ್ಮಾಣದ ಪ್ರದೇಶ ಪುರಾತತ್ವ ಇಲಾಖೆಗೆ ಸಂಬಂಧಪಟ್ಟಿದ್ದು ಕಟ್ಟಡ ನಿರ್ಮಾಣ ನಿಷೇಧ ಅಂತ ನಿರ್ದೇಶನ ನೀಡಿದೆ..ಆದ್ರೆ ನಗರಸಭೆಯ ಈ ಹಿಂದಿನ ಅಧಿಕಾರಿಗಳು ನಗರಸಭೆ ಅನುದಾನದಲ್ಲೇ ಪುರಾತತ್ವ ಇಲಾಖೆಗೆ ಸೇರಿದ ಸ್ಥಳದಲ್ಲಿ ಕಮಾನ್ ಕಾಮಗಾರಿ ನಡೆಸಲು ಟೆಂಡರ್ ಕರೆದಿದ್ರು,ಆದ್ರೆ ಈಗ ಕಾಮಗಾರಿ ಪ್ರಾರಂಭವಾಗಿದೆ.ನಗರಸಭೆಯ ಹಿಂದಿನ ಅಧಿಕಾರಿಗಳ ಎಡವಟ್ಟಿಗೆ ಈಗ ಕಮಾನ್ ನಿರ್ಮಾಣ ಸ್ಥಳ ವಿವಾದಕ್ಕೆ ಕಾರಣವಾಗಿದ್ದು ತಪ್ಪೆಸಗಿ ವಿವಾದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು..ಜೊತೆ ಸದ್ಯದ ಕಮಾನ್ ನಿರ್ಮಾಣದ ಬಗ್ಗೆ ಎರಡು ಸಮುದಾಯವ್ರ ಜೊತೆ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ
ವರದಿ: ಅನಿಲ್ ಕುಮಾರ್