ರಾಮನಗರ: ಚಾಮುಂಡೇಶ್ವರಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬಣ್ಣಬಣ್ಣದ ಹೂಗಳಿಂದ ಚಾಮುಂಡೇಶ್ವರಿ ದೇವಾಲಯವನ್ನು ಅಲಂಕೃತಗೊಳ್ಳಿಸಲಾಗಿದೆ. ಮುಂಜಾನೆಯಿಂದಲೇ ಧಾರ್ಮಿಕ ಪೂಜಾ ಕೈಕರ್ಯ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ರೇಷ್ಮೆ ನಗರಿಯಾಗಿದೆ.
ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ರ ವರೆಗೂ ಕರಗದ ಮೆರವಣಿಗೆ ಸಾಗಲಿದೆ. ಏಕಕಾಲದಲ್ಲಿ ಅಷ್ಠ ಮಾತೃಕೆಯರ ಕರಗ ಉತ್ಸವವಾಗಿದ್ದು, ದೇವಾಲಯಗಳಲ್ಲಿ ಭರದ ಸಿದ್ದತೆ ನಡೆದಿದೆ.
ಬೆಳಗ್ಗೆಯಿಂದಲೇ ದೇವಾಲಯಕ್ಕೆ ತೆರಳಿ ದೇವಿ ದರ್ಶನವನ್ನು ಭಕ್ತಾಧಿಗಳು ಪಡೆಯುತ್ತಿದ್ದಾರೆ. ಸಂಜೆ ಜಿಲ್ಲಾ ಕ್ರೀಡಾಂಗಣದಲ್ಲಿ ಖ್ಯಾತ ಗಾಯಕರಿಂದ ಅದ್ದೂರಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮ್ಯೂಸಿಕಲ್ ನೈಟ್ ಗೆ ತಾರಾ ಮೆರಗು ಸಹ ಇದೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಆ್ಯಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಸೇರಿಂದ ಹಲವಾರು ಆಗಮಿಸಲಿದ್ದಾರೆ.
ಇಂದು ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆ.
ಭಾವೈಕ್ಯತೆಯ ಸಂದೇಶವನ್ನು ಜನರಿಗೆ ರಾಮನಗರ ಕ್ಷೇತ್ರದ ಶಾಸಕ ಇಕ್ಭಾಲ್ ಹುಸೇನ್ ಸಾರಿದರು.
ಕರಗ ಮಹೋತ್ಸವದ ಮುನ್ನಾ ದೇವಸ್ಥಾನದಲ್ಲಿ ಮಡಿಲಕ್ಕಿ ಸೇವೆಯನ್ನು ಶಾಸಕ ಇಕ್ಭಾಲ್ ಹುಸೇನ್ ನೇರವೇರಿಸಿದರು. ರಾಮನಗರದ ಚಾಮುಂಡೇಶ್ವರಿ ಹಾಗೂ ಆದಿಶಕ್ತಿ ಸೇರಿದಂತೆ ನಗರ ಅಷ್ಠಮಾತೃಕೆಯರಿಗೆ ಮಡಿಲಕ್ಕಿ ಸೇವೆಯನ್ನು ನೇರವೇರಿಸದ್ದಾರೆ. ಹಿಂದೂ ಶಕ್ತಿ ದೇವತೆಗೆ ಸಹ ಮಡಲಕ್ಕಿ ಸೇವಯನ್ನು ಮುಸ್ಲಿಂ ಶಾಸಕ ಸಮರ್ಪಿಸಿದರು.
ನನಗೆ ರಾಮನೂ ಒಂದೇ ರಹೀಮನೂ ಒಂದೇ. ನನಗೆ ಈ ದೇವಿ ಆಶೀರ್ವಾದಿಂದ ಈ ಅವಕಾಶ ಸಿಕ್ಕಿದೆ.
ನಾನು ಬೆಳದಿರುವುದೇ ಈ ಧರ್ಮದವರ ಜೊತೆ ಹಾಗೂ ನನಗೆ ಎಲ್ಲಾ ದೇವರೂ ಒಂದೇ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.