ಮಳೆರಾಯ ಕೂಡ ಸ್ವಲ್ಪ ಸಮಯ ಬಂದು ಹೊರಟು ಹೋದ. ಆದರೆ ಶಿಡ್ಲಘಟ್ಟದಲ್ಲಿ ಬಿಜೆಪಿಗೆ ಸೇರ್ತಾ ಇರೋರ ಸಂಖ್ಯೆ ಕಮ್ಮಿ ಆಗ್ತಾ ಇಲ್ಲ. ಸೀಕಲ್ ರಾಮಚಂದ್ರಗೌಡರು ಶಿಡ್ಲಘಟ್ಟದಲ್ಲಿ ಬಿಜೆಪಿ ನಾಯಕತ್ವ ವಹಿಸಿಕೊಂಡ ಮೇಲೆ ಶಿಡ್ಲಘಟ್ಟ ಜನ ಹೊಸ ಹುರುಪಿನೊಂದಿಗೆ ಇದ್ದಾರೆ. ಇದರ ಫಲವಾಗಿ ಪ್ರತಿದಿನ ಸಾವಿರಾರು ಜನರು ಸೇರ್ಪಡೆ ಆಗುತ್ತಲೇ ಇದ್ದಾರೆ.
ಆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಜನ ಕಾಂಗ್ರೆಸ್ ನ ಹಾಲಿ ಮುಖಂಡರು ಮತ್ತು ಸದಸ್ಯರುಗಳು ಬಿಜೆಪಿಗೆ ಸೇರ್ಪಡೆಯಾದರು. ಪ್ರಭಾಕರ್ ಬೋದನೂರು, ವಿಶ್ವಾಸ್ ಬೋದನೂರು, ಸುರೇಶ, ನಾಗೇಶ್ ಜಪ್ತಿಹೊಸ ಹಳ್ಳಿ, ಮುನಿಯಪ್ಪ ಡಬರಗಾನಹಳ್ಳಿ, ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಹಾಲಿ ಮುಖಂಡರು ಮತ್ತು ಸದಸ್ಯರು ಪಕ್ಷದ ಶಾಲು ಧರಿಸುವುದರೊಂದಿಗೆ ಬಿಜೆಪಿಗೆ ಸೇರಿದರು.
ಸೀಕಲ್ ರಾಮಚಂದ್ರ ಗೌಡ ಮಾತನಾಡಿ ತಾವೆಲ್ಲ ನನ್ನ ಮೇಲೆ , ಪಕ್ಷದ ಮೇಲೆ, ನಾಯಕರ ಮೇಲೆ ವಿಶ್ವಾಸ ಇಟ್ಟು ಬಂದಿದ್ದೀರಾ ಯಾವುದೇ ಕಾರಣಕ್ಕೂ ನಿಮ್ಮ ವಿಶ್ವಾಸಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಹಳ್ಳಿ ರಾಜಕಾರಣ ಬೇರೆ, ಡೆಲ್ಲಿ ರಾಜಕಾರಣ ಬೇರೆ. ಹಳ್ಳಿ ರಾಜಕಾರಣ ಕಷ್ಟ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ಕೈ ಜೋಡಿಸಿ ಇದನ್ನ ಬಿಜೆಪಿಯ ಭದ್ರಕೋಟೆ ಮಾಡುವತ್ತ ಕೆಲಸ ಮಾಡೋಣ. ಜೊತೆಗೆ ನಿಮ್ಮನ್ನು ನಾಯಕತ್ವದ ಹಂತಕ್ಕೆ ತೆಗೆದುಕೊಂಡು ಹೋಗುವುದೇ ನಮ್ಮ ಗುರಿ ಎಂದರು. ಇದೆ ಸಂಧರ್ಭದಲ್ಲಿ ಮಾಜಿ ಶಾಸಕರಾದ ಎಂ ರಾಜಣ್ಣ, ಸುರೇಶ, ಶೂಲ್ ದೇವರಾಜ್, ಬೆಳ್ಳೂಟಿ ಸುಜಾತಮ್ಮ, ಅರಿಕೇರೆ ಮುನಿರಾಜು ಹಾಜರಿದ್ದರು.