ಲಕ್ಕುಂಡಿ : ಬೈಲಹೊಂಗಲ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಅನಧಿಕೃತ ಆಸ್ಪತ್ರೆ ನಡೆಸುತ್ತಿರುವ ಚಂದ್ರಶೇಖರ ಬಾನಿ ಎಂಬ ಆಸಾಮಿಯನ್ನು ಪ್ರಶ್ನಿಸಲು ಹೋದಾಗ ನಾನು ಕ್ವಾಲಿಫಾಯಡ್ BHMS ಡಾಕ್ಟರ್ ಅಂತಾನೆ ಆದರೆ ಬಾಯಲ್ಲಿ ಬರೊ ಮಾತುಗಳು ಮಾತ್ರ ಪುಡಿ ರೌಡಿಗಳ ಭಾಷೆ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೆ ಆಸ್ಪತ್ರೆ ನಡೆಸುತ್ತಿರುವ ಈತನನ್ನು ಪ್ರಶ್ನಿಸಲು ಹೋದ ಪತ್ರಕರ್ತರಿಗೆ ಕೇಳತಾನೆ ನಿವ್ಯಾರು ಕೇಳೋಕೆ, ನಾನು ಏನ ಬೇಕಾದ್ರು ಮಾಡತಿನಿ ಹೇಗ ಬೇಕಾದ್ರು ಚಿಕಿತ್ಸೆ ನೀಡತಿನಿ ನಿಮಗ ಏನ ಮಾಡಕೊಳ್ಳೊಕೆ ಆಗತ್ತೆ ಅಂತಾ ರೌಡಿ ರೀತಿಯಲ್ಲಿ ವರ್ತಿಸುತ್ತಾನೆ.
ಜೊತೆಗೆ ಕೇವಲ 5/6 ವರ್ಷದ ಬಾಲಕಿಗೆ ಎರೆಡೆಡು ಹೈಡೋಸ್ ಇಂಜೆಕ್ಷನ್ ನೀಡಿದ್ದಾನೆ. ಪಕ್ಕದಲ್ಲಿ ಮುರದಿರುವ ಪಲ್ಲಂಗದ ಮೇಲೆ ವಯಸ್ಸಾದ ವ್ಯಕ್ತಿಗೆ ಸಲಾಯನ್ ಹಚ್ಚಿ ಮಲಗಿಸಿದ್ದಾನೆ. ಈತನ ಸರ್ಟಿಫಿಕೇಟ್ ನೋಡಬೇಕಾದಲ್ಲಿ ಅದಾಗಿಯೂ ತಾಲೂಕಾ ವೈದ್ಯಾಧಿಕಾರಿಗಳು ಈತನಿಗೆ ಎಚ್ಚರಿಕೆ ನೀಡಿದರು.
ಅವರ ಮಾತಿಗೂ ಬೆಲೆ ಕೊಡದೆ ಇಷ್ಟೆಲ್ಲ ರಾಜಾ ರೋಷವಾಗಿ ಅನಧಿಕೃತ ಆಸ್ಪತ್ರೆ ತೆರೆದು ಮುಗ್ದ ಹಳ್ಳಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಾ, ಹೈ ಡೋಸ್ ಇಂಜೆಕ್ಷನ್ ಹಾಗೂ ಸಲಾಯನ್ ಹಚ್ಚುತ್ತಾ ಮನಬಂದಂತೆ ಚಿಕಿತ್ಸೆ ನೀಡುತ್ತಿರುವ ಈತನ ವಿರುದ್ಧ ಸಂಭಂದಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡಬೇಕಿದೆ.