ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಯನ್ನು ಈ ವರ್ಷಾಂತ್ಯದ ವೇಳೆಗೆ ನಡೆಸುವುದಾಗಿ ಸರ್ಕಾರದ ಚುಕ್ಕಾಣಿ ಹಿಡಿದವರು ಪದೇ ಪದೇ ಹೇಳುತ್ತಾ ಬರುತ್ತಲ್ಲೆ ಇದ್ದರು. ಆದ್ರೆ ಪಾಲಿಕೆ ಚುನಾವಣೆ ಮುಹೂರ್ತ ಕೂಡಿ ಬಂದಿಲ್ಲ
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಗಿದು ಮೂರು ವರ್ಷಗಳು ಕಳಿತಾ ಬಂದಿದೆ, ಅದ್ಯಾಕೋ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿಲ್ಲ. ವರ್ಷಾಂತ್ಯದ ವೇಳೆಗೆ ನಡೆಸುವುದಾಗಿ ಸರ್ಕಾರದ ಚುಕ್ಕಾಣಿ ಹಿಡಿದವರು ಪದೇ ಪದೇ ಹೇಳುತ್ತಾಲ್ಲೆ ಬರುತ್ತಿದ್ದಾರೆ. ಆದರೆ ಚುನಾವಣೆಗೆ ಮುಹೂರ್ತ ಮಾತ್ರ ಕುಡಿ ಬರುತ್ತಿಲ್ಲ. ಇನ್ನೂ ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅವಧಿ ಮುಗಿದು ಐಎಎಸ್ ಅಧಿಕಾರಿಗಳ ಆಡಳಿತ ಆರಂಭವಾಗಿ ಬರೋಬ್ಬರಿ 3 ವರ್ಷಗಳಾಗಿವೆ. ಆದರೂ, ರಾಜ್ಯ ಸರ್ಕಾರ ಮಾತ್ರ ಬಿಬಿಎಂಪಿ ಚುನಾವಣೆಗಿರುವ ಅಡೆತಡೆಗಳನ್ನು ನಿವಾರಿಸಿ, ಚುನಾವಣೆ ನಡೆಸುವ ಗೋಜಿಗೇ ಹೋಗುತ್ತಿಲ್ಲ. ಮೇಲ್ನೋಟಕ್ಕೆ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದ್ದರೂ, ಸರಕಾರ ಚುನಾವಣೆಗೆ ಬೇಕಾದ ಪೂರಕ ಪ್ರಕ್ರಿಯೆಗಳನ್ನು ಮಾತ್ರ ಮಾಡುತ್ತಿಲ್ಲ.
ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ 243 ವಾರ್ಡ್‌ಗಳನ್ನು ಹಾಲಿ ಕಾಂಗ್ರೆಸ್ ಸರ್ಕಾರ 225ಕ್ಕೆ ಇಳಿಸಿದೆ. ಹೀಗೆ ವಾರ್ಡ್‌ಗಳ ಸಂಖ್ಯೆ ಕುಗ್ಗಿಸುವ ಸಂದರ್ಭದಲ್ಲಿ ಹಲವು ವಾರ್ಡ್‌ಗಳ ಹೆಸರನ್ನು ಬದಲಿಸಲಾಗಿದೆ. ಅದರಲ್ಲಿ 1949ರಿಂದಲೂ ಅಸ್ತಿತ್ವದಲ್ಲಿರುವ ಬಸವನಗುಡಿ ವಾರ್ಡ್ ಹೆಸರನ್ನು ದೊಡ್ಡ ಗಣಪತಿ ದೇವಸ್ಥಾನ ವಾರ್ಡ್ ಎಂದು ಮರುನಾಮಕರಣ ಮಾಡಲಾಗಿದೆ. ಅದರಿಂದ ಸಿಟ್ಟಾಗಿರುವ ಬಸವನಗುಡಿ ನಿವಾಸಿಗಳು ಹಾಗೂ ಕೆಲ ಮಾಜಿ ಕಾರ್ಪೋರೇಟರ್‌ಗಳು ವಾರ್ಡ್ ಹೆಸರು ಬದಲಾವಣೆ ಹಿಂಪಡೆದು ಬಸವನಗುಡಿ ಎಂದೇ ಮರುನಾಮಕರಣ ಮಾಡಬೇಕೆಂದು ಸರ್ಕಾರಕ್ಕೆ ನಿರ್ದೇಶಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಒಂದು ವಾರ್ಡ್‌ನ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಚುನಾವಣೆಗೆ ಸಂಬಂಧಿಸಿದಂತೆ ಬೇರೆ ಪ್ರಕ್ರಿಯೆಗಳು ನಡೆಸಲು ಸಾಧ್ಯವಿಲ್ಲ ಎಂಬುದು ಸರ್ಕಾರದ ವಡಮಾಡುತ್ತಿದ್ದೂ. ದಿನಕ್ಕೊಂದು ಕುಂಟು ನೇಪಗಳ್ಳನ್ನು ಹೇಳುತ್ತಾ ಬರುತ್ತಿದೆ. ಸದ್ಯಕ್ಕೆ ರಾಜ್ಯ ಸರ್ಕಾರ ಲೋಕಸಭೆ ಚುನಾವಣೆ ಮುಗಿಯೊವರೆಗೂ ಬಿಬಿಎಂಪಿ ಚುನಾವಣೆಯ ಗೋಜಿಗೆ ಹೋಗುವಂತೆ ಕಾಣುತ್ತಿಲ್ಲ.
ಇನ್ನೂ ನಿಯಮದಂತೆ ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆಯುವುದಕ್ಕೂ 180 ದಿನಗಳ (6 ತಿಂಗಳು) ಒಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿದ್ದರೆ, ಅದರ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅದರಂತೆ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದರ ಪ್ರಕಾರ ಡಿ.13ರೊಳಗೆ ರಾಜ್ಯದಲ್ಲಿ ಬಿಬಿಎಂಪಿ ಚುನಾವಣೆ ಪೂರ್ಣಗೊಳಿಸಬೇಕಿದೆ. ಹಾಗಾದರೆ ಬಿಬಿಎಂಪಿ ಚುನಾವಣೆ ನಡೆಸಲು ಕೇವಲ 43 ದಿನಗಳು ಮಾತ್ರ ಉಳಿದಿವೆ. ಅಷ್ಟರೊಳಗೆ ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟಿಸಿ, ಅದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು, ನಂತರ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಬೇಕು.
ಅದೇನೇ ಇರ್ಲಿ ಕಳೆದ ಮೂರು ವರ್ಷಗಳಿಂದ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಯದೆ ಇರೋದ್ರಿಂದ ನಗರದಲ್ಲಿನ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದು, ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಮಹಾನಗರ ಪಾಲಿಕೆಯ ಚುನಾವಣೆ ನಡೆಸುತ್ತಾ ಎಂಬುದು ಕಾದು ನೋಡಬೇಕಾಗಿದೆ.
ವರದಿ: ಮಂಜುನಾಥ್, ನಿರೋಣಿ