ಇತ್ತೀಚೆಗಷ್ಟೆ ರೈತರಿಗೆ ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವರೊಬ್ಬರು ಇದೀಗ ಮತ್ತೊಮ್ಮೆ ರೈತರ ಬಗ್ಗೆ ಲಘುವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.ಇದಕ್ಕೆ ಕೇಸರಿ ಕಲಿಗಳು ಸಚಿವರ ವಿರುದ್ಧ ಮುಗಿಬಿದ್ದಿದ್ದು ತಕ್ಷಣವೇ ಸಂಪುಟದಿನ ವಜಾ ಮಾಡಬೇಕು ಅಂದು ಅಗ್ರಹಿಸಿದ್ದಾರೆ….ಅಷ್ಟಕ್ಕೂ ಆ ಸಚಿವರು ಯಾರು ಅವರು ನೀಡಿದ ಹೇಳಿಕೆ ಏನು ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್……
ಹೌದು, ರೈತರಿಗೆ ಪರಿಹಾರ ನೀಡಿದ ಬಳಿಕ ರೈತರ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚಾಗುತ್ತಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಶಿವಾನಂದ್ ಪಾಟೀಲ್ ಮತ್ತೊಮ್ಮೆ ರೈತರ ಬಗ್ಗೆ ಲಘುವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.ಬೆಳಗಾವಿಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು , ಸಾಲ ಮನ್ನಾದ ಆಸೆಗಾಗಿ ಬರಗಾಲ ಬರಲೆಂದು ರೈತರು ಕಾಯುತ್ತಾರೆ ಎಂದು ಉಢಾಫೆ ಹೇಳಿಕೆ ನೀಡಿದ್ದಾರೆ…ಕೃಷ್ಣಾ ನದಿ ನೀರು ಪುಕ್ಕಟೆ ಆಗಿದೆ. ಕರೆಂಟ್ ಪುಕ್ಕಟೆ ಸಿಗುತ್ತಿದೆ. ಬಹಳಷ್ಟ ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜವನ್ನೂ ಕೊಟ್ಟರು, ಗೊಬ್ಬರವನ್ನೂ ಕೊಟ್ಟರು. ಇನ್ನೂ ರೈತರಿಗೆ ಒಂದೆ ಆಸೆ ಇದೆ.., ಮ್ಯಾಲ ಮ್ಯಾಲ ಬರಗಾಲ ಬೀಳಲಿ ಎಂದು. ಏಕೆಂದರೆ, ಸಾಲ ಮನ್ನಾ ಆಗುತ್ತೆ ಅಂದು. ಈ ರೀತಿಯಾಗಿ ಬಯಸಬಾರದು ಎಂದು ಹೇಳಿದ್ದಾರೆ….