ಮೈಸೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಎಂ ನಿವಾಸದ ಬಳಿ ರೈತರು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿಸಿಎಂ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಪೊಲೀಸರು ನಿಯೋಜನೆ ಮಾಡಿದ್ದಾರೆ. ಸಿದ್ದರಾಮಯ್ಯ ನಿವಾಸದ ಬಳಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ನಿವಾಸದ ಆಸುಪಾಸಿನಲ್ಲೂ ಪೊಲೀಸರ ನಿಯೋಜಿಸಲಾಗಿದ್ದು,ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು ಹಾಕಲಾಗಿದೆ. ಸಿಎಂ ಸಿದ್ದರಾಮಯ್ಯ ನಿವಾಸ ಸಂಪರ್ಕಿಸುವ ರಸ್ತೆಗಳ ಬಳಿ ಬ್ಯಾರಿಕೇಡ್ ಪೊಲೀಸರು ಅಳವಡಿಸಿದ್ದಾರೆ.
ಸಿದ್ದರಾಮಯ್ಯ ನಿವಾಸ ಇರುವ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳನ್ನು ಹೊರತುಪಡಿಸಿ ಬೇರೆಯವರ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.
ಡಿಸಿಪಿ ಮುತ್ತುರಾಜ್ ಆಗಮನ, ಭದ್ರತೆ ಪರಿಶೀಲನೆ ನಡೆಸಿದ್ದು, ಪ್ರತಿಭಟನೆ ಆರಂಭಕ್ಕೂ ಮೊದಲೇ ರೈತರ ಬಂಧಿಸಲಾಗಿದೆ. ಪ್ರತಿಭಟನೆಗೂ ಮುನ್ನ ಸಿ.ಎಂ ನಿವಾಸದತ್ತ ಬಂದ ಕೆಲ ರೈತರನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಒಂಬತ್ತು ರೈತರನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಸಿ.ಎಂ ನಿವಾಸಕ್ಕೆ 1 ಕಿ.ಮೀ ದೂರದಲ್ಲೇ ನಾಕಾಬಂಧಿ ಹಾಕಲಾಗಿದೆ. ಸಿದ್ದರಾಮಯ್ಯ ನಿವಾಸ ಸಂಪರ್ಕಿಸುವ ಎಲ್ಲಾ ರಸ್ತೆಗಳು ಬಂದ್ ಮಾಡಲಾಗಿದೆ.