ರಾಯಚೂರು : ಆಸ್ಪತ್ರೆಗೆ ತೆರಳಿದ್ದ ತಾಯಿ ಮಗನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ.
ಇದೇ ಜನೆವರಿ 4ರಂದು ಸಂಜೆ ಆದರ್ಶ ಕಾಲೋನಿಯಲ್ಲಿರುವ ಆಸ್ಪತ್ರೆಗೆ ಮಗನೊಂದಿಗೆ ತೆರಳಿದ್ದ ಗಂಗಮ್ಮ. ವೇಳೆ ಹೊರ ಬರುತ್ತಿದ್ದ ತಾಯಿ ಮಗ. ತಾಯಿ ಸ್ಕೂಟಿ ಬಳಿ ತೆರಳಿದ್ದಳು. ಹಿಂದೆ ಬರುತ್ತಿದ್ದ ಮಗ ಪ್ರೀತಂ ಮೇಲೆ ಏಕಾಏಕಿ ದಾಳಿ ನಡೆಸಿದೆ. ಕೆಳಗೆ ಬಿದ್ದು ಒದ್ದಾಡಿದರೂ ಕಾಲು ತೊಡೆ ಭಾಗಕ್ಕೆ ಬಲವಾಗಿ ಕಚ್ಚಿರುವ ಬೀದಿನಾಯಿ.
ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಹಿರಿಯನಾಗರಿಕರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಈ ಹಿಂದೆಯೂ ಹಲವು ಬಾರಿ ಬೀದಿನಾಯಿಗಳು ದಾರಿಹೋಕರಿಗೆ ಕಚ್ಚಿದ ಘಟನೆಗಳುವ ನಡೆದಿವೆ. ಆದರೂ ನಗರಸಭೆ ಅಧಿಕಾರಿಗಳು ಬೀದಿನಾಯಿಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ.
ಎಚ್ಚೆತ್ತ ನಗರಸಭೆ ಬೀದಿ ನಾಯಿಗಳಿಗೆ ಚುಚ್ಚುಮದ್ದು ನೀಡುತ್ತಿದ್ದಾರೆ. ಶ್ವಾನಗಳಿಗೆ ಹಿಡಿದು ರೇಬಿಸ್ ಚುಚ್ಚುಮದ್ದು ನೀಡಿದ ಸಿಂಧನೂರು ನಗರ ಸಭೆ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರಲ್ಲಿ ಆತಂಕ ಇದರಿಂದ 2-3 ದಿನಗಳಿಂದ ಕಾರ್ಯಾಚರಣೆ ನಡೆಸಿ ಶ್ವಾನಗಳಿಗೆ ರೇಬಿಸ್ ಚುಚ್ಚುಮದ್ದು ನೀಡಿದ ನಗರಸಭೆ ಅಧಿಕಾರಿಗಳು.