ವಿಜಯನಗರ (Vijayanagara) ದ ಹಂಪಿ ಉತ್ಸವಕ್ಕೆ ಕೆ.ಕೆ ಆರ್.ಟಿ.ಸಿ (KKRTC) ಯಿಂದ ಪ್ರಯಾಣಿಕರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ವಿಶ್ವವಿಖ್ಯಾತ ಹಂಪಿಯಲ್ಲಿ ನಡೆಯುವ ಹಂಪಿ ಉತ್ಸವಕ್ಕೆ ಮೊದಲನೇ ದಿನ ನಿರೀಕ್ಷೆ ಮಾಡಿದಷ್ಟು ಜನತೆ ಆಗಮಿಸಿರಲಿಲ್ಲ. ಗಾಯಿತ್ರಿ ಪೀಠದ ಮುಖ್ಯ ವೇದಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) ಉದ್ಘಾಟನೆ ವೇಳೆ ಜನರಿಗಿಂತ ಖಾಲಿ ಖುರ್ಚಿಗಳೇ ಕಂಡಿದ್ದವು.
ಹಂಪಿ (Hampi) ಉತ್ಸವ ಜನರ ಉತ್ಸವ ಆಗಬೇಕಿತ್ತು. ಆದ್ರೆ ಪೊಲೀಸರ ಭದ್ರತೆಯಿಂದ ಅಧಿಕಾರಿಗಳ ಉತ್ಸವ ಆಗಿತ್ತು. ಹಂಪಿ ಉತ್ಸವ ಜನರಿಗಾಗಿ ಮಾಡುವ ಉತ್ಸವ ಆಗಿದೆ . ಆದ್ರೆ ಜನರೇ ಇಲ್ಲಾಂದ್ರೆ ಯಾಕೆ ಉತ್ಸವ ಮಾಡಬೇಕೆಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಆನಂದ್ ಸಿಂಗ್ (Anand singh) ವೇದಿಕೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಈ ಘಟನೆ ಆದ ಬೆನ್ನಲ್ಲೇ ಜಿಲ್ಲಾಡಳಿತ ಯಾವುದೇ ರೀತಿಯ ಬಿಗಿ ಭದ್ರತೆ ಇಲ್ಲದೆ ಎಲ್ಲಾರಿಗೂ ವಿಐಪಿ ಪಾಸ್ ಗಳು ಇಲ್ಲದೇ ಮುಕ್ತ ಅವಕಾಶ ಕಲ್ಪಿಸಿದೆ. ಜನವರಿ 28 ಮತ್ತು 29 ರಂದು ಎರಡು ದಿನಗಳ ಕಾಲ ಹಂಪಿ ಉತ್ಸವಕ್ಕೆ 120 ಕ್ಕೂ ಹೆಚ್ಚು ಹೊಸಪೇಟೆಯಿಂದ ಹಂಪಿಗೆ ಉಚಿತ ಬಸ್ ಗ ಸೌಲಭ್ಯ ಒದಗಿಸಲಾಗಿದೆ. ಹಾಗಾಗಿ ಹಂಪಿ ಉತ್ಸವಕ್ಕೆ ಜನತೆ ಆಗಮಿಸುತ್ತಿದ್ದಾರೆ.
ಇದನ್ನು ಓದಿ :- ವೋಟಿಗಾಗಿ ಶಾದಿಮಹಲ್ ನಿರ್ಮಾಣ ಮಾಡಿಲ್ಲ – ಸಿದ್ದರಾಮಯ್ಯ