ಬೆಂಗಳೂರು:ಗೊತ್ತಿಲ್ಲಪ್ಪ,ಅದಕ್ಕೆ ಮಾತಾಡುವ ಅವಶ್ಯಕತೆ ಇಲ್ಲ. ಅದಕ್ಕೆ ಪದೇ ಪದೇ ನೀವು ಉಪ್ಪು ಖಾರ ಹಾಕ್ತೀರಾ .ನಾನು ಎನು ಮಾತಾಡಲ್ಲ. ಸರ್ಕಾರ ಸ್ಥಿರತೆಯಿಂದ ಕೊಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬೀಳಲ್ಲ. ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ. ಅವರ ಮಾತಿಗೆಲ್ಲ ಉತ್ತರ ಕೊಡ್ತಾ ಕೂರೋಕೆ ಆಗಲ್ಲ. ನೀವು ಅದಕ್ಕೆ ಉಪ್ಪ ಖಾರ ಹಾಕಿ. ಸರ್ಕಾರ ಸ್ಥಿರತೆಯಿಂದ ಕೂಡಿದೆ. ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬಿದ್ದ ಹೋಗೋದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇಡೀ ರಾಷ್ಟ್ರದಲ್ಲಿ ಇಂದಿರಾ ಗಾಂಧಿ ಪುಣ್ಯ ತಿಥಿ ಆಚರಣೆ ಮಾಡಿ ನಮನ ಸಲ್ಲಿಸಲಾಗುತ್ತಿದೆ.ಇಂದಿರಾಗಾಂಧಿ ದೇಶ ಕಂಡ ಅತ್ಯಂತ ಜನಪ್ರಿಯ ರಾಜಕಾರಣಿ.ಬಹಳ ಧೈರ್ಯ ಇದ್ದ ಮಹಿಳೆ.ದೇಶದ ಬಡವರ ಆರಾಧ್ಯ ದೈವರಾಗಿದ್ದವರು ಇಂದಿರಾ ಗಾಂಧಿ.1978 ರಲ್ಲಿ ನಾನು ಜನತಾಪಾರ್ಟಿಯಲ್ಲಿ ಇದ್ದೆ.ಹಾರೋಹಳ್ಳಿ ಎಂಬ ಕಡೆ ನಾನು ಓಟು ಕೇಳಲು ಜನತಾ ಪಾರ್ಟಿ ಅಧ್ಯಕ್ಷನಾಗಿ ಹೋಗಿದ್ದೆ.
ಮನೆ ಮನೆಗೆ ಹೋಗಿ ಅಲ್ಲಿ ವಿಚಾರಿಸುತ್ತಿದ್ದೆ.ಅವರ ಮನೆ ಮನೆಗಳಲ್ಲಿ ಇಂದಿರಾ ಗಾಂಧಿ ಫೋಟೋ ಇರ್ತಿತ್ತು.ಅಲ್ಲಿಯ ಜನರು- ಏನೇ ಹೇಳಿಕೊಳ್ಳಿ ನಾವು ಇಂದಿರಾಗಾಂಧಿ ಗೆ ಓಟು ಹಾಕೋದು ಅಂದ್ರು.ಬಡವರ ಆರಾಧ್ಯ ಧೈವ ಅಂತ ಪೂಜಿಸುತ್ತಿದ್ದರು.ಅಷ್ಟು ಪಾಪ್ಯುಲರ್ ಲೀಡರ್ ಇನ್ಜೊಬ್ಬರನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.