ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಹೆಚ್ ಡಿ ಕುಮಾರಸ್ವಾಮಿ ನೂತನ ಸಾರಥಿಯಾಗಿದ್ದಾರೆ. ಲೋಕಸಭಾ ಚುನಾವಣಾಗೆ ಮೈತ್ರಿಯಾಗಿರುವ ದಳಪತಿಗಳಿಗೆ ಸಾಲು ಸಾಲು ಸವಾಲು ಹಾಕಿದ್ದಾರೆ. ನೂತನ ಅಧ್ಯಕ್ಷರಾದ ಕುಮಾರಸ್ವಾಮಿ ಸವಾಲು, ಗುರಿ ಸಾಕಷ್ಟು ಇವೆ.
ಹತ್ತು ಹಲವು ಸವಾಲುಗಳನ್ನ ಎದುರಿಸಲು ಹೆಚ್ ಡಿ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ನೂತನ ರಾಜ್ಯಾಧ್ಯಕ್ಷ ಹೆಚ್. ಡಿ ಕುಮಾರಸ್ವಾಮಿ ಮುಂದಿರುವ ಸವಾಲುಗಳು ಯಾವುವು ಗೊತ್ತಾ? ಇಲ್ಲಿದೆ ಮಾಹಿತಿ.
ವಿಧಾನಸಭಾ ಸೋಲಿನಿಂದ ಹೊರಬರವಂತೆ ಮುಖಂಡರ ಮತ್ತು ಕಾರ್ಯಕರ್ತರ ಸಜ್ಜುಗೊಳಿಸುವು ಮೈತ್ರಿಯಿಂದ ಮುಸ್ಲಿಂ ಸಮುದಾಯ ಕಡೆಗಣನೆ ಎಂಬ ಸಂದೇಶಕ್ಕೆ ಬ್ರೇಕ್ ಹಾಕಿ, ಸಮುದಾಯವನ್ನ ಒಲೈಸುವುದು.ಮೈತ್ರಿ ಮಾಡಿಕೊಂಡ ಬಿಜೆಪಿ ನಾಯಕರ ಜೊತೆಗೆ ಹೊಂದಾಣಿಕೆ ಸಾಧಿಸುವುದು.ಮೈತ್ರಿ ಯಿಂದ ಸ್ಥಳೀಯ ಮಟ್ಟದಲ್ಲಿ ಎದುರಾಗುವ ಸಮಸ್ಯೆಗಳನ್ನ ಬಗೆಹರಿಸುವುದು.ಆಪರೇಷನ್ ಹಸ್ತಕ್ಕೆ ಒಳಗಾಗದಂತೆ
ಶಾಸಕರನ್ನ ಹಿಡಿದಿಟ್ಟುಕೊಳ್ಳುವುದು. ದೇವೇಗೌಡರ ಮೊದಲಿನ ಹಾಗೇ ಓಡಾಟವಿಲ್ಲ,. ಕುಮಾರಸ್ವಾಮಿ ಆರೋಗ್ಯ ಸಹ ಮೊದಲಿನಷ್ಟು ಸಪೊಟ್೯ ಮಾಡುತ್ತಾ..?ಎರಡು ಬಾರೀ ಚುನಾವಣೆಯಲ್ಲಿ ಸೋತಮಗನ ರಾಜಕೀಯ ಭವಿಷ್ಯ ರೂಪಿಸುವುದು.
ಹೆಚ್ ಡಿ ಕುಮಾರಸ್ವಾಮಿ ಮುಂದಿರುವ ಗುರಿಗಳು ಯಾವುವು ಗೊತ್ತಾ?
ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಜೊತೆಗೆ ಮೈತ್ರಿಕೊಂಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸುವುದು.ಮೈತ್ರಿಯಿಂದ ಸಿಗುವ ನಾಲ್ಕು ಕ್ಷೇತ್ರದಲ್ಲೂ ಗೆಲುವು ಸಾಧಿಸುವುದು. ಹಳೇ ಮೈಸೂರು ಭಾಗ ಸೇರಿದಂತೆ ರಾಜ್ಯಾದ್ಯಂತ ಪಕ್ಷ ಸಂಘಟನೆ ನಡೆಸುವುದು.ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಕುಮಾರಸ್ವಾಮಿ ಮುಂದೆದೇ ಹಲವು ದಾಖಲೆಯಾಗಿದೆ.ಹಲವು ದಾಖಲೆಗಳನ್ನ ಬಿಡುಗಡೆ ಮಾಡುವ ಮೂಲಕ ಸಿಎಂ ಹಾಗೂ ಡಿಸಿಎಂ ಟಾರ್ಗೆಟ್ ಮಾಡುವುದು.ಸರ್ಕಾರದ ವಿರುದ್ಧ ಮತ್ತೆ ಸಮರಕ್ಕೆ ಹೆಚ್‌ಡಿ ಕುಮಾರಸ್ವಾಮಿ ಸಿದ್ದವಾಗಿದೆ.
ಇಂದು ಇಂಧನ ಇಲಾಖೆ ಸಂಬಂಧ ಮಹತ್ವದ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಜೆಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆಯಲಿದೆ. ವಿದ್ಯುತ್ ಕೊರತೆ ಕುರಿತು ರಾಜ್ಯದ ಜನತೆಗೆ ವಿವರಣೆ ನೀಡಲಿರುವ ಕುಮಾರಸ್ವಾಮಿ..ರಾಜ್ಯದಲ್ಲಿ ಮಳೆ ಕಡಿಮೆ ಬಿದ್ದಿದ್ದರಿಂದ ವಿದ್ಯುತ್ ಬೇಡಿಕೆ ದ್ವಿಗುಣ.ಹೀಗಾಗಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಸರ್ಕಾರ ಎನ್ನುತ್ತಿದೆ. ಸರ್ಕಾರ ವಿದ್ಯುತ್ ಉತ್ಪಾದನೆಯಲ್ಲಿ ಮಾಡಿದ ಲೋಪದೋಷಗಳನ್ನ ದಾಖಲೆ ಸಮೇತ ಮುಂದಿಡಲು ಹೆಚ್‌ಡಿಕೆ ತಯಾರಿಯಾಗಿದೆ.