ಬೆಂಗಳೂರು: ಕೋಟಿ ಕೋಟಿ ಖರ್ಚು ಮಾಡಿ ಕಾಮಗಾರಿ ಒಂದೇ ವರ್ಷದಲ್ಲಿ ಹಾಳಾಗಿ ಹೋಗಿದೆ. ಕೆಆರ್ ಮಾರ್ಕೆಟ್ ಅನ್ನ ಹೈಟೆಕ್ ಮಾಡ್ತೀವಿ ಅಂತ ಹೇಳಿ ಸರ್ಕಾರ ಮತ್ತು ಬಿಬಿಎಂಪಿ ವೈಟ್ ಟೈಪಿಂಗ್ ಹಾಕಿ ಫುಟ್ಪಾತ್ ಮಾಡಿತ್ತು. ಈ ಹೈಟೆಕ್ ಫುಟ್ಪಾತ್ ನಲ್ಲಿ ಇದೀಗ ಬ್ರಿಕ್ಸ್ ಅನ್ನ ಹಾಕ್ತಾ ಇದ್ದಾರೆ. ಆದರೆ ಕಾಮಗಾರಿಯಾದ ಒಂದೇ ವರ್ಷದಲ್ಲಿ ಬ್ರಿಕ್ಸ್ ಗಳು ಕಿತ್ತು ಹೋಗಿ ಫುಟ್ಪಾತ್ ತುಂಬಾ ಗುಂಡಿಗಳು ಬಿದ್ದಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗ್ತಾ ಇದೆ. ಹೀಗಾಗಿ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹೌದು ಬೆಂಗಳೂರಿಗೆ ಹೈಟೆಕ್ ಸ್ಪರ್ಶ ಕೊಡ್ತೀವಿ ಅಂತ ಬಿಬಿಎಂಪಿ ಹಾಗು ಸರ್ಕಾರ ಹಲವು ಕಡೆ ಕಾಮಗಾರಿಗಳನ್ನು ಪ್ರಾರಂಭ ಮಾಡಿದೆ. ಪ್ರಮುಖ ಜಂಕ್ಷನ್ ಸರ್ಕಲ್ ಗಳಲ್ಲಿ ಹೈಟೆಕ್ ಜಂಕ್ಷನ್ ಗಳನ್ನು ಮಾಡಲಾಗುತ್ತಿದೆ, ವೈಟ್ ಟ್ಯಾಪಿಂಗ್ ಮಾಡಿ ಫುಟ್ಪಾತ್ಗಳಿಗೆ ಹೈಟೆಕ್ ಸ್ಪರ್ಶ ಕೊಡಲಾಗುತ್ತಿದೆ. ಅದರಂತೆ ಕೆ ಆರ್ ಮಾರ್ಕೆಟ್ ನ ಬಹುತೇಕ ಕಡೆಗಳಲ್ಲಿ ವೈಟ್ ಟೈಪಿಂಗ್ ಮಾಡಲಾಗಿದೆ. ಜೊತೆಗೆ ಫುಟ್ಬಾತ್ ಗಳು ಕೂಡ ಒಂದುವರೆ ವರ್ಷಗಳ ಹಿಂದೆ ಸ್ಮಾರ್ಟ್ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಬ್ರಿಪ್ಸ್ ಗಳನ್ನ ಅಳವಡಿಸಿ ಹೈಟೆಕ್ ಸ್ಪರ್ಶ ಕೊಡಲಾಗಿತ್ತು. ಆದರೆ ಕಳಪೆ ಕಾಮಗಾರಿಗಾಗಿ ಉತ್ಪಾದಕ ಅಳವಡಿಸಲಾಗಿದ್ದ ಬ್ರಿಕ್ಸ್ ಗಳು ಕಿತ್ತು ಹೋಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗ್ತಾ ಇದೆ.
ನೋಡಿದ್ರಲ್ಲ ಕೆಆರ್ ಮಾರ್ಕೆಟ್ ನಲ್ಲಿ ಮಾಡಿದ ಕಳಪೆ ಕಾಮಗಾರಿ ಇಂದಾಗಿ ಜನರ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇನ್ನು ಫುಟ್ಪಾತ್ ಕಿತ್ತು ಹೋಗಿರುವುದರಿಂದಾಗಿ ಜನ ಮುಖ್ಯರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಯಾವಾಗಲೂ ಜನರಟ್ಟಣೆಯಿಂದ ಕೂಡಿದ ಕೆಆರ್ ಮಾರ್ಕೆಟ್ ನಲ್ಲಿ ಯಾವಾಗಲೂ ವಾಹನದ ಘಟನೆ ಇರುತ್ತೆ ಹಿಕ್ಕಾಗಿ ಫುಟ್ಪಾತ್ ಬಿಟ್ಟು ಜನ ರಸ್ತೆ ಮೇಲೆ ಓಡಾಡೋದರಿಂದ ಅಪಾಯಗಳು ಆಗುವ ಸಾಧ್ಯತೆ ಕೂಡ ಇರುತ್ತೆ. ಈ ರೀತಿಯಾಗಿ ಹೈಟೆಕ್ ಮಾಡ್ತವೆ ಅಂತ ಕಾಮಗಾರಿ ಮಾಡಿದ ಒಂದೇ ವರ್ಷದಲ್ಲಿ ಪುಟ್ಬಾತ್ ಕಿತ್ತು ಹೋಗಿದ್ದಕ್ಕೆ ಕಳಪೆ ಕಾಮಗಾರಿ ಮಾಡಿದ್ದ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಒಟ್ನಲ್ಲಿ ಕಳಪೆ ಕಾಮಗಾರಿಗಳ ಬಗ್ಗೆ ಸರ್ಕಾರ ಕೂಡ ತನಿಖೆ ನಡೆಸ್ತಾ ಇದು ಲೋಕಾಯುಕ್ತದಲ್ಲೂ ಕೂಡ ತನಿಖೆ ನಡೆಯುತ್ತಿದೆ. ಈಗ ಮತ್ತೆ ಕಳಪೆ ಕಾಮಗಾರಿ ಬೈಲಿಗೆ ಬಂದಿದ್ದು ಸರ್ಕಾರ ತನಿಖೆ ನಡೆಸುತ್ತಾ ಎಂಬುದು ಕಾದು ನೋಡಬೇಕಾಗಿದೆ.
ವರದಿ: ಮಂಜುನಾಥ್, ನಿರೋಣಿ