Political NewsState News

ದೆಹಲಿಯಲ್ಲಿ ಕಾಂಗ್ರೆಸ್‌ ನಾಯಕರ ಹೈವೋಲ್ಟೇಜ್ ಸಭೆ..!

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ನಾಯಕರು ಮೂರು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದಾರೆ.ಪಕ್ಷದ ಹಲವು ವಿಷಯಗಳು ಬಗ್ಗೆ ಹೈಕಮಾಂಡ್ ನಾಯಕರು ಜೊತೆ ಚರ್ಚೆ ನಡೆಸಲಿರುವ ಕೈ ನಾಯಕರು..ಲೋಕಸಭೆ ಚುನಾವಣೆ ರಣತಂತ್ರ ರೂಪಿಸುವುದಕ್ಕೆ ಎಐಸಿಸಿ ನಾಯಕರಿಂದ ಮಾರ್ಗದರ್ಶನ.

ಗ್ಯಾರಂಟಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಕಾಂಗ್ರೆಸ್‌ ನಾಯಕರು ಮೂರು ದಿನಗಳ ಕಾಲ‌ ಈ ಮೊದಲ ಬಾರಿಗೆ ಹೈಕಮಾಂಡ್ ನಾಯರನ್ನ ಭೇಟಿ ಮಾಡಲು ಮುಂದಾಗಿದ್ದಾರೆ. ಪಕ್ಷದ ಅನೇಕ ಕೆಲಸಗಳು ಭಾಕಿ ಇವೆ. ಅದರಲ್ಲಿ ಪ್ರಮುಖವಾಗಿ ನಿಗಮಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ನೇಮಕ ಕುರಿತು ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆಶಿವಕುಮಾರ್ ಪಕ್ಷದ ಹೈಕಮಾಂಡ್ ನಾಯಕರ ಜೊತೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ.

ಎಸ್ ಈಗಾಗಲೇ ರಾಜ್ಯ ಕಾಂಗ್ರೆಸ್‌ ನಲ್ಲಿ ನಿಗಮಮಂಡಳಿ ನೇಮಕಕ್ಕೆ ಶಾಸಕರಿಂದ ಒತ್ತಾಯ ಹೆಚ್ಚಾಗಿವೆ. ಸರ್ಕಾರದ ವಿರುದ್ಧವೇ ಹಲವು ಶಾಸಕರು ಪತ್ರಗಳನ್ನ ಬರೆಯುವ ಮೂಲಕ ಸರ್ಕಾರಕ್ಕೆ ಮುಜಗರ ಉಂಟುಮಾಡುತ್ತಿದ್ದಾರೆ. ಈ ಹಿನ್ನಲೆ ನಿಗಮಮಂಡಳಿ ನೇಮಕ ಆಗಿಲ್ಲ‌ ಅಂದ್ರೆ ಲೋಕಸಭೆ ಚುನಾವಣೆಗೆ ಪಕ್ಷಸಂಘನೆ ಕಷ್ಟಕ ಎಂಬ ವಾತಾವರಣ ಸೃಷ್ಟಿ ಆಗಿದೆ.ಈ ಹಿನ್ನಲೆ ಈದನ್ನ‌ ಅರಿತುಕೊಂಡ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಈ ಭಾರಿ ನಿಗಮಮಂಡಳಿ ಪಟ್ಟಿ ತೆಗೆದುಕೊಂಡು ಬಂದೆ ಬರುತ್ತೇವೆ ಎಂದು ಸಹ ಹೇಳಿದ್ದಾರೆ..

ಕೆಪಿಸಿಸಿ ಕಾರ್ಯಾಧ್ಯಕ್ಷರನ್ನ ಬದಲಾವಣೆ ಮಾಡಬೇಕು ಈಗಿರುವ ಕೆಲವು ಕಾರ್ಯಾಧ್ಯಕ್ಷರು ಸಚಿವರಾಗಿದ್ದು ಬೇರೆ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಕಳೆದ ಭಾರಿ ಹೈಕಮಾಂಡ್ ನಾಯಕರ ಸಭೆಯಲ್ಲಿ ಚರ್ಚೆ ಆಗಿದೆ ಈ ಭಾರಿ ಕಾರ್ಯಾಧ್ಯಕ್ಷರ ನೇಮಕ ಮಾಡುವ ಸಾಧ್ಯತೆ ಇದೆ. ಈ ಹಿನ್ನಲೆ ರಾಜ್ಯಸಭಾ ಸದಸ್ಯ ಜಿ.ಸಿ. ಪಂಚಮಸಾಲಿ ಪಂಗಡಕ್ಕೆ ಸೇರಿದ ಒಕ್ಕಲಿಗ ಚಂದ್ರಶೇಖರ್‌, ವೀರಶೈವ ಲಿಂಗಾಯತ ವಿನಯ್‌ ಕುಲಕರ್ಣಿ ಅವರೂ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಮಹಿಳಾ ಕೋಟಾದಡಿ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಈ ಹಿನ್ನಲೆ ಇವರಿಗೆ ಕಾರ್ಯಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಇದೆ.

ಇನ್ನೂ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹೂಡಕಾಟದಲ್ಲಿರುವ ಕೈ ನಾಯಕರು ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಯಾವ ರೀತಿ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗಳನ್ನ ಸ್ಫರ್ಧೆಗೆ ಅವಕಾಶ ಕೊಡಬೇಕು..ಬೇರೆ ಪಕ್ಷದಿಂದ ಕರೆತರುವಂತಹ ಪ್ರಯತ್ನ ಮಾಡಬೇಕ ಎಂಬುದು ಚರ್ಚೆ ನಡೆಸಲಿದ್ದಾರೆ..ಇನ್ನೂ ಅಭ್ಯರ್ಥಿಗಳಿಗೆ ಟೀಕೆಟ್ ಕೊಡುವ ಬಗ್ಗೆ ಕ್ಷೇತ್ರಗಳಲ್ಲಿ ಅವರ ಪ್ರಭಾವ ಯಾವ ರೀತಿಯಿದೆ ಎಂಬುದನ್ನ ತಿಳಿದುಕೊಳ್ಳಲು ಸಚವರಿಗೆ ಜವಾಬ್ದಾರಿ ನೀಡಿದ್ರು..ಈ ಹಿನ್ನಲೆ ಅವರು ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ ಆ ರಿಪೋರ್ಟ್‌ ಬಗ್ಗೆ ಚರ್ಚೆ ನಡೆಯಲಿದೆ.

ಒಟ್ಟಾರೆ ದೆಹಲಿಯಲ್ಲಿ ರಾಜ್ಯ ನಾಯಕರು ಹಲವು ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ..ಪ್ರಮುಖವಾಗಿ ನಿಗಮಮಂಡಳಿ ರೇಸ್ ನಲ್ಲಿರುವ ಶಾಸಕರನ್ನ ಸಮಾಧಾನ ಪಡಿಸುವ ಪ್ರಯತ್ನ ಮಾಡಲಿದ್ದಾರೆ..ಇನ್ನೂ ಲೋಕಸಭಾ ಚುನಾಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು ರಾಜ್ಯದಲ್ಲಿ ಕಾಂಗ್ರೆಸ್ ಇದೆ ಈ ಹಿನ್ನಲೆ ಹೆಚ್ಚಿನ ಎಪರ್ಟ್ ಹಾಕಿದ್ರೆ ಗೆಲು ಖಚಿತ ಎಂಬುವುದು ಕೈ ನಾಯಕರ ಲೆಕ್ಕಾಚಾರ ಆಗಿದೆ..ಇನ್ನೊಂದು ಕಡೆ ಪಕ್ಷದಲ್ಲಿನ ಹಲವು ನಾಯಕರ ಅಸಮಧಾನ,ಜಾತಿ ಗಣತಿಗೆ ಪರ ವಿರೋಧಗಳ ಬೆಳವಣಿಗೆ ಪರಿಣಾಮದ ಕುರಿತು ಚರ್ಚೆ ನಡೆಸಿಲಿದ್ದಾರೆ.

ಬಸವರಾಜ ಹೂಗಾರ ಪೊಲಿಟಿಕಲ್ ಬ್ಯೂರೋ ರಾಜ್ ನ್ಯೂಸ್ ಕನ್ನಡ ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!