ಬೆಂಗಳೂರು : ತಂತ್ರಜ್ಞಾನ ಬಳಸಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರ ವಿರುದ್ಧ ಸಂಪರ್ಕರಹಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿರುವ ಸಂಚಾರ ಪೊಲೀಸರು ಒನ್ ವೇ ಸಂಚಾರ, ನೋ ಪಾರ್ಕಿಂಗ್, ಪುತ್ ಪಾತ್ ಗಳಲ್ಲಿ ಪಾರ್ಕಿಂಗ್ ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನ ನಿಲ್ಲಿಸುವ ಸವಾರರ ವಿರುದ್ಧ ಕಳೆದ ಆರು ತಿಂಗಳಲ್ಲಿ 5,280 ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಲು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡಿರುವ ಸಂಚಾರ ಪೊಲೀಸರು ಆತ್ಯಾಧುನಿಕ ಕ್ಯಾಮರಗಳ ಮೂಲಕ ಸಂಪರ್ಕರಹಿತವಾಗಿ ಉಲ್ಲಂಘನಾ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.
ಆದಾಗ್ಯೂ ನಗರದಲ್ಲಿ ನೋ ಎಂಟ್ರಿಯಲ್ಲಿ ವಾಹನ ಸಂಚಾರ, ನೋ ಪಾರ್ಕಿಂಗ್ ಹಾಗೂ ಫುತ್ ಪಾತ್ ನಲ್ಲಿ ವಾಹನ ಸಂಚಾರದಿಂದಾಗಿ ಇತ್ತೀಚಿನ ದಿನಗಳಲ್ಲಿ ಮಾರಣಾಂತಿಕ ಅಪಘಾತಗಳು ಹೆಚ್ಚಾಗಿದ್ದು ಕಳೆದ ಆರು ತಿಂಗಳಲ್ಲಿ ಸಂಭವಿಸಿದ 2,354 ಅಪಘಾತಗಳಲ್ಲಿ 414 ಮಂದಿ ಬಲಿಯಾಗಿದ್ದಾರೆ. 2096 ವಾಹನ ಸವಾರರು ಗಾಯಗೊಂಡಿದ್ದಾರೆ.
ಪ್ರತಿ ತಿಂಗಳು ಸರಾಸರಿ 70 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದು ಆತಂಕಕಾರಿಯಾಗಿದೆ. ಆರು ತಿಂಗಳಲ್ಲಿ 5,280 ಕ್ರಿಮಿನಲ್ ಕೇಸ್ ದಾಖಲು ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟಿಸಿಕೊಂಡರೂ ಎಚ್ಚೆತ್ತುಕೊಳ್ಳದ ಸವಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಇದಕ್ಕೆ ಕ್ಯಾರೆ ಅನ್ನದ ಸವಾರರ ವಿರುದ್ಧ ಐಪಿಸಿ ಸೆಕ್ಷನ್ 283ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ನಲ್ಲಿ ಮಾಡಿದ್ದ ಸವಾರರ ವಿರುದ್ಧ 697 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅದೇ ರೀತಿ ಪುತ್ ಪಾತ್ ನಲ್ಲಿ ವಾಹನ ಸಂಚಾರದಡಿ 118 , ಒನ್ ವೇ ಮಾರ್ಗದಲ್ಲಿ ಸಂಚಾರಿಸಿದ ವಿರುದ್ಧ 1772 ಕೇಸ್ ದಾಖಲಾದರೆ ನೋ ಪಾರ್ಕಿಂಗ್ ಹಾಗೂ ರಾಂಗ್ ಪಾರ್ಕಿಂಗ್ ಮಾಡಿದ 2693 ಕೇಸ್ ದಾಖಲಿಕೊಳ್ಳಲಾಗಿದ್ದು 5280 ಕೇಸ್ ದಾಖಲಿಸಿಕೊಳ್ಳಲಾಗಿದೆ. ದಿನೇ ದಿನೇ ನಗರದಲ್ಲಿ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ. ರಸ್ತೆ ಗುಣಮಟ್ಟ ಕಳಪೆ ಸೇರಿದಂತೆ ಮೂಲಭೂತ ಸೌರ್ಕಯ ಕೊರತೆಯಿಂದ ಕೆಲವೆಡೆ ಅಪಘಾತ ಸಂಭವಿಸಿದರೆ ಮತ್ತೊಂದೆಡೆ ವೇಗದ ಚಾಲನೆ, ಹೆಲ್ಮೆಟ್ ಧರಿಸದಿರುವುದು, ಸಿಟ್ ಬೆಲ್ಟ್ ಧರಿಸದೆ ವಾಹನ ಸಂಚಾರದಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಟ್ರಾಫಿಕ್ ಪೊಲೀಸರು ಸಹ ಹೆಚ್ಚಾಗುತ್ತಿರುವ ಅಫಘಾತ ನಡೆಯುವ 60 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಕಳೆದ ಆರು ತಿಂಗಳಲ್ಲಿ 45 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿವೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ ನೀಡಿದ್ದಾರೆ.
ವರದಿ : ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್ .