ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಂಟ್ರಿ ಆದ್ರೆ ಸಾಕು ಅಟ್ರ್ಯಾಕ್ಟ್ ಆಗೋದು ಅಂದ್ರೆ ದೊಡ್ಡ ದೊಡ್ಡ ಬಿಲ್ಡಿಂಗ್ಸ್. ಅದರಲ್ಲೂ ಗಾಜಿನ ಬಿಲ್ಡಿಂಗ್ಸ್. ಇದೆಲ್ಲ ಗೊತ್ತಿರೋ ವಿಷಯ ಯಾಕೆ ಹೇಳ್ತಿದೀವಿ ಅಂತಾ ಕನ್ ಫ್ಯುಸ್ ಆದ್ರಾ. ಈ ಸ್ಟೋರಿ ನೋಡಿ..
ಯೆಸ್.. ಕಟ್ಟಡ ನಿರ್ಮಾಣದಲ್ಲಿ ಗಾಜಿನ ಬಳಕೆ ಒಂದು ಫ್ಯಾಶನ್ ಆಗಿಬಿಟ್ಟಿದೆ. ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲೂ ಗ್ಲಾಸ್ ಬಿಲ್ಡಿಂಗ್ಸ್ ಗಳು ಹೆಚ್ಚಾಗ್ತಾ ಇವೆ. ಬಿಲ್ಡಿಂಗ್ಸ್ ಸೌಂದರ್ಯ ಹೆಚ್ಚಿಸಲು ಅವುಗಳ ನಿರ್ಮಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ಲಾಸ್ ಬಳಕೆ ಮಾಡಲಾಗುತ್ತಿದೆ. ಆದ್ರೆ ಈ ಗ್ಲಾಸ್ ಬಿಲ್ಡಿಂಗ್ಸ್ ಎಷ್ಟು ಸೇಫ್ ಅನ್ನೋದೇ ಈಗ ದೊಡ್ಡ ಸವಾಲಾಗಿದೆ.
ಇತ್ತೀಚೆಗೆ ಮಡ್‌ಪೈಪ್ ಕೆಫೆಗೆ ಬೆಂಕಿ ಹೊತ್ತಿಕೊಂಡಿತು. ಒಬ್ಬ ವ್ಯಕ್ತಿ ಕಟ್ಟಡದ ಮೇಲಿನಿಂದ ಬಿದ್ದು ಗಾಯ ಕೂಡ ಗೊಂಡಿದ್ದ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಬೆಂಕಿಯಿಂದಾಗಿ ಕಟ್ಟಡದ ಗಾಜುಗಳು ಒಡೆದುಹೋಗಿದವು, ಕೆಫೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದ್ದು ಇದರ ವಿಡಿಯೋ ಕೂಡ ವೈರಲ್ ಆಗಿದೆ. ಇನ್ನು ಬೆಂಕಿ ಅನಾಹುತಗಳು ಸಂಭವಿಸಿದಾಗ ಕಟ್ಟಡಗಳಲ್ಲಿ ಸೇಫ್ಟಿಯ ಕೊರತೆ ಇರುತ್ತೆ. ಇನ್ನು ಕಾಂಕ್ರೀಟ್ ಬಿಲ್ಡಿಂಗಳಲ್ಲಿ, ಬೆಂಕಿಯ ಸಂದರ್ಭದಲ್ಲಿ ಕಿಟಕಿ ಗಾಜುಗಳು ಒಡೆದು ಹೋಗುತ್ತವೆ. ಆದರೆ ಗಾಜಿನ ಕಟ್ಟಡಗಳಲ್ಲಿ, ಇಡೀ ಕಟ್ಟಡವೇ ಬೀಳುವ ಚಾನ್ಸಸ್ ಕೂಡ ಇರುತ್ತೆ. ಗಾಜುಗಳು ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತವೆ, ಇದರಿಂದ ಜನರು ತಪ್ಪಿಸಿಕೊಳ್ಳುವುದು ಹೆಚ್ಚು ಕಷ್ಟವಾಗುತ್ತೆ.
ಇನ್ನು ಗಾಜಿನ ಕಟ್ಟಡಗಳ ನಿರ್ಮಾಣದ ಯೋಜನೆಗಳಿಗೆ ಅನುಮತಿ ನೀಡುವಾಗ, ಬೆಂಕಿ ದುರಂತಗಳ ಸಂದರ್ಭದಲ್ಲಿ ಯಾವುದೇ ಸುರಕ್ಷಣಾ ಕ್ರಮಗಳನ್ನು ಅನುಸರಿಸುವುದಿಲ್ಲ ಅನ್ನೋದು ಕೆಲವರ ಮಾತಾಗಿದೆ. ಅಲ್ಲದೆ ಗಾಜಿನ ಕಟ್ಟಡಗಳು ಸೇಫ್ ಅಲ್ಲ. ಪರಿಸರಕ್ಕೂ ಕೂಡ ಹಾನಿಕಾರಕ. ಇನ್ನು ಕಟ್ಟಡ ನಿರ್ಮಾಣದಲ್ಲಿ ಗಾಜಿನ ಬಳಕೆ ಒಂದು ಫ್ಯಾಶನ್ ಆಗಿಬಿಟ್ಟಿದೆ. ಆದರೆ ಭಾರತದ ಹವಾಮಾನಕ್ಕೆ ಇದು ಹೊಂಡಿಕೊಳ್ಳೋದು ಇಲ್ಲ.
ಅದೇನೇ ಇರಲಿ ಗಾಜಿನ ಕಟ್ಟಡಗಳಲ್ಲಿ ಸೇಫ್ಟಿ ಕ್ರಮ ಕೈಗೊಳ್ಳಲು ಬಿಬಿಎಂಪಿ ಈಗಾಗಲೇ ಗಾಜಿನ ಕಟ್ಟಡಗಳ ಸಮೀಕ್ಷೆ ನಡೆಸಲು ಪ್ಲಾನ್ ಮಾಡ್ತಾ ಇದೆ. ಮುಂದಿನ ದಿನಗಳಲ್ಲಿ ಇಂತಹ ಅನಾಹುತಕ್ಕೆ ಈ ಘಟನೆಯೇ ಎಚ್ಚರಿಕೆಯ ಗಂಟೆಯಾಗಲಿದೆ.
ವರದಿ: ಹರ್ಶಿತಾ ಪಾಟೀಲ