ಶಿವಮೊಗ್ಗ: ಇಷ್ಟು ಭಂಡತನ ಇರುವವರನ್ನು ನಾನು ನೋಡಿರಲಿಲ್ಲ. ಡಿ.ಕೆ ಶಿವಕುಮಾರ್ ಇಂದಲ್ಲ ನಾಳೆ ಮತ್ತೆ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆಗೊಂಡು ಬೆಂಗಳೂರಿನಿಂದ ಮೆರವಣಿಗೆಯಲ್ಲಿ ಬಂದಿದ್ದು ನೋಡಿ ಕೇಸ್ ಖುಲಾಸೆಯಾಗಿದೆ ಅಂದುಕೊಂಡಿದ್ದೆ. ಅವರು ಎಷ್ಟು ಅಕ್ರಮ ವಾಗಿ ಹಣ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಇದೇ ಕೇಸ್ ವಿಚಾರಕ್ಕೆ ಅವರು ಜೈಲಲ್ಲಿ ಇದ್ದರು. ಈಗ ಬೇಲ್ ಮೇಲೆ ಹೊರಗಿದ್ದಾರೆ. ಮತ್ತೆ ಜೈಲು ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಹಿಂದೂಗಳ ವಿರುದ್ಧ ಏನೆಲ್ಲಾ ಮಾಡಬೇಕು ಅದನ್ನೆಲ್ಲ ಮಾಡುತ್ತಿದೆ. ಅರಿಶಿನ ಹಾಗೂ ಕುಂಕುಮ ಬಳಸಬಾರದು ಎಂದು ನೇರವಾಗಿ ಹೇಳದೇ ಜಾಣತನದಿಂದ ಆದೇಶ ಹೊರಡಿಸಿದೆ.