Political NewsState News

ನವ ವಸಂತಕ್ಕೆ ದಿಟ್ಟ ಹೆಜ್ಜೆ ಇಟ್ಟ ಭಾರತ : ಮೋದಿ ನವಹಾದಿ..

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಇವತ್ತಿಗೆ ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸಿದೆ. ನರೇಮದ್ರ ಮೋದಿ ಪ್ರಧಾನಿಯಾದಾಗಿನಿಂದಲೂ ಒಮದಲ್ಲ ೊಂದು ಯೋಜನೆಯನ್ನು ಜನರಿಗೆ ತಲುಪಿಸೋ ಪ್ರಯತ್ನ ಮಾಡಿದ್ದಾರೆ.. ಅದ್ರಲ್ಲು ದೇಶದ ಜನತೆಗೆ ಅಚ್ಚು ಮೆಚ್ಚಿನ ನಾಯಕ.. ಇಡೀ ವಿಶ್ವಕ್ಕೆ ವಿಶ್ವನಾಯಕರಾಗಿ ಗುರುತಿಸಿಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಸಾಮಾನ್ಯ ಜನರು ವಿಶ್ವನಾಯಕನ್ನು ಏಕೆ ಒಪ್ಪಿಕೊಳ್ಳುತ್ತಾರೆ ಅನ್ನೋಪ್ರಶ್ನೆ ಹುಟ್ಟಿಕೊಳ್ಳಬಹುದು.. ದೇಶದ ಜನರಷ್ಟೇ ಅಲ್ಲಾ, ಪ್ರಪಂಚದ ಕೆಲ ಪ್ರಧಾನಿಗಳು ಮೋದಿಯನ್ನು ಹಾಡಿ ಹೊಗಳಿದ್ದಾರೆ.. ಅದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣು ಮುಂದೆ ಸಾಕ್ಷಿಯಾಗಿದೆ. ಅದಕ್ಕೂ ಹೆಚ್ಚಿನದಾಗಿ ದೇಶದ ಜನತೆ ಮೋದಿಯನ್ನು ಗಣ್ಯಾತಿ ಗಣ್ಯರಲ್ಲಿ ಒನ್ನರು ಅನ್ನೂವಂತೆ ನೋಡ್ತೀದ್ದಾರೆ. ಅದಕ್ಕೆ ಕಾರಣ ಹಲವು ಉಧಾಹರಣೆಗಳೊಂದಿಗೆ ನಮ್ಮೆದುರಿದೆ.. ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳ ಅಮಾನ್ನೀಕರಣ, ಸರಕು ಮತ್ತು ಸೇವಾ ತೆರಿಗೆ ಅಳವಡಿಕೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾದ ಸಮಸ್ಯೆ ಎದುರಿಸಲು ಆತ್ಮನಿರ್ಭರ ಭಾರತಕ್ಕೆ ಕರೆ, ಕಲ್ಯಾಣ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ನೇರ ವರ್ಗಾವಣೆ, ಗಡಿಗಳಲ್ಲಿ ಆಕ್ರಮಣ ಸೇರಿದಂತೆ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. 2014ರ ಮೇ 26ರಂದು ಸ್ಪಷ್ಟ ಬಹುಮತ ಪಡೆದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ನಂತರ ನಾಲ್ಕನೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಮೊದಲ ಮೂವರು ಕಾಂಗ್ರೆಸ್ ಪಕ್ಷದವರಾಗಿದ್ದರೆ, ಮೋದಿಯವರು ಮಾತ್ರ ದೀರ್ಘಕಾಲ ಪ್ರಧಾನಿಯಾದ ಕಾಂಗ್ರೆಸ್ಸೇತರ ನಾಯಕ ಎಂಬುದು ಗಮನಾರ್ಹ ಸಂಗತಿಯಾಗಿದೆ.

2019ರಲ್ಲಿ ಬ್ರಿಟನ್ನನ್ನು ಹಿಂದಿಕ್ಕುವ ಮೂಲಕ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹೊರಹೊಮ್ಮಿರುವುದು ಈ ಅವಧಿಯಲ್ಲಿ ಅತಿದೊಡ್ಡ ಸಾಧನೆ ಎನ್ನಲಾಗಿದೆ.. ಆದರೂ ಇತ್ತೀಚಿನ ವರ್ಷಗಳಲ್ಲಿ ಭಾರತದ ಜಿಡಿಪಿ ಒಟ್ಟು ದೇಶೀಯ ಉತ್ಪನ್ನ ಬೆಳವಣಿಗೆಯು ಸಮರೂಪವಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಕೋವಿಡ್ ಸಾಂಕ್ರಾಮಿಕ. 2016-17 ರಲ್ಲಿ ಆರ್ಥಿಕ ಬೆಳವಣಿಗೆಯು ಶೇ. 8ರ ತಲುಪಿದ ನಂತರದ ವರ್ಷಗಳಲ್ಲಿ, ಕೋವಿಡ್ ಕಾಣಿಸಿಕೊಳ್ಳುವ ಮುಂಚಿತವಾಗಿಯೇ ಈ ದರವು ಕೆಳಮುಖದ ಹಾದಿಯಲ್ಲಿತ್ತು. ರೂ 1,000 ಮತ್ತು ರೂ 500 ಮುಖಬೆಲೆಯ ಕರೆನ್ಸಿ ನೋಟುಗಳ ಅಮಾನೀಕರಣವನ್ನು ಕಂಡ ವರ್ಷ 2017-18 ರಲ್ಲಿ ಆರ್ಥಿಕ ಬೆಳವಣಿಗೆಯ ದರವು ಶೇ. 6.8, 2018-19, 2019-20ಕ್ಕೆ ಸೀಮಿತವಾಯಿತು. ಆದರೆ, ಕೋವಿಡ್ ಲಾಕ್ಡೌನ್ ಸಮಯದಲ್ಲಿ (ಹಣಕಾಸು ವರ್ಷ 2020-21) .ಈ ದರವು ಋಣಾತ್ಮಕವಾಗಿ ಶೇ.5.83ರಷ್ಟು ಇಳಿಕೆ ಕಂಡಿತು. ಆದರೂ, ಇದು 2021-22 ರಲ್ಲಿ ಶೇ. 9.05 ಹಾಗೂ 2022-23ರಲ್ಲಿ ಶೇ.7ರಷ್ಟು ಬೆಳವಣಿಗೆ ಕಂಡಿದ್ದು ವಿಶೇಷ, ಭಾರತೀಯರ ತಲಾದಾಯವು ಜಿಡಿಪಿ ಅನುಸಾರವೇ ಏರಿಳಿತ ಕಂಡಿತು.

ಕಳೆದ ಒಂಬತ್ತು ವರ್ಷಗಳಲ್ಲಿ ಮೂಲಸೌಕರ್ಯವು ಮೋದಿ ಸರ್ಕಾರದ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿದೆ. ರಸ್ತೆ, ರೈಲು ಮಾರ್ಗ, ವಿಮಾನ ನಿಲ್ದಾಣ, ಮೂಲಸೌಕರ್ಯ ಯೋಜನೆಗಳು ಸಂಖ್ಯೆ ಮತ್ತು ಗಾತ್ರದಲ್ಲಿ ವ್ಯಾಪಕ ಹೆಚ್ಚಳ ಕಂಡಿವೆ. ದೇಶದ ಒಟ್ಟು ಹೆದ್ದಾರಿಗಳ ಉದ್ದವು 2014-15 ರಲ್ಲಿ 97,830 ಕಿಮೀಗಳಿಂದ 2022ರ ಡಿಸೆಂಬರ್ ಅಂತ್ಯದ ವೇಳೆಗೆ 1,44,955 ಕ್ಕೆ ಏರಿದೆ. ಹೆದ್ದಾರಿ ನಿರ್ಮಾಣದಲ್ಲಿ ಇದು ಬಹುದೊಡ್ಡ ಯಶೋಗಾಥೆಯೇ ಆಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!