ಪ್ರಧಾನಿ ಮೋದಿ ಮತ್ತು ಕರ್ನಾಟಕಕ್ಕೆ ಏನ್ ಸಂಬಂಧ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಪ್ರಶ್ನೇ ಮಾಡಿದ್ದಾರೆ.ನಗರದ ಸದಾಶಿವನಗರದಲ್ಲಿ ಮಾತನಾಡಿದ ಅವರು ರಾಜ್ಯಕ್ಕೆ ಪಿಎಂ ಮೋದಿ ಬರಲಿ ತುಂಬಾ ಖುಷಿ. ಪಿಎಂ ಮೋದಿ ಟೀಕೆಗಳ ಲೆಕ್ಕ ಹಾಕ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಪ್ರಧಾನಿ ಮೋದಿ ಮಾತಾಡಬೇಕು. ಕೋವಿಡ್ ಸಮಯದಲ್ಲಿ ೨೦ ಲಕ್ಷ ಕೋಟಿ ಹಣದ ಬಗ್ಗೆ ಪಿಎಂ ಮಾತಾಡಿದ್ರೆ ಅದಕ್ಕೆ ಒಂದು ಅರ್ಥಾ ಇತ್ತು. ಆದ್ರೆ ಇದರ ಬಗ್ಗೆ ಪಿಎಂ ಮಾತಾಡ್ತಿಲ್ಲ.ಕೋವಿಡ್ ನಲ್ಲಿ ಸತ್ತವರಿಗೆ ಇನ್ನೂ ಹಣ ಸಿಕ್ಕಿಲ್ಲ. ಪ್ರಧಾನಿ ಮೋದಿ ನಂಗೆ ವೋಟ್ ಕೋಡಿ ಅಂತಿದ್ದಾರೆ.
ಪ್ರಧಾನಿ ಮೋದಿ ಮತ್ತು ಕರ್ನಾಟಕಕ್ಕೆ ಏನ ಸಂಬಂಧ..? ರಾಜ್ಯ ಬಿಜೆಪಿಯಲ್ಲಿ ಲೀಡರ್ ಶೀಪ್ ಇಲ್ವಾ…ಸಿಎಂ ಬೊಮ್ಮಾಯಿಗೆ ನಾಯಕತ್ವ ಕೊಡಲಿಲ್ಲ. ಯಡಿಯೂರಪ್ಪ ಅವ್ರಿಗೂ ನಾಯಕತ್ವ ನೀಡಿಲ್ಲ ಎಂದು ಟೀಕಿಸಿದರು. ಇನ್ನೂ ನಮ್ಮ ಗ್ಯಾರಂಟಿ ಬಗ್ಗೆ ಪ್ರಧಾನಿ ಮೋದಿ ಮಾತಾಡ್ತಿದ್ದಾರೆ. ನಡ್ಡಾ ಕೂಡ ನಮ್ಮ ಗ್ಯಾರಂಟಿ ಬಗ್ಗೆ ಮಾತಾಡ್ತಿದ್ದಾರೆ.ಇಡೀ ರಾಜ್ಯದ್ಯಾಂತ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡುತ್ತೇವೆ. ನಮ್ಮ 5 ಗ್ಯಾರಂಟಿಯನ್ನು ನಮ್ಮ ಮೊದಲನೆಯ ಕ್ಯಾಬಿನೆಟ್ ನಲ್ಲಿ ಪಾಸ್ ಮಾಡ್ತಿವಿ.ನಮ್ಮ ಗ್ಯಾರಂಟಿ ಪೂರೈಕೆಗೆ ಹಣ ಎಲ್ಲಿಂದ ಬರುತ್ತೆ ಎಂದು ಟೀಕೆ ಮಾಡ್ತಿದ್ದಾರೆ. ನಾವು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಬಿಜೆಪಿ ಪಕ್ಷಕ್ಕೆ ಆಡಳಿತ ಮಾಡಿರುವ ಅನುಭವ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ : ಬಸವರಾಜ ಹೂಗಾರ