ರಾಯಚೂರು : ಇಂದು ಹೊಸ ವರ್ಷಾಚರಣೆ(New Year)ಯ ಸಂಭ್ರಮ ಹಿನ್ನೆಲೆ ಮಂತ್ರಾಲಯ (Mantralayam)ದ ರಾಯರ ಮಠದಲ್ಲಿ ಜನಸಾಗರ ಹರಿದುಬಂದಿದೆ.
ಹೊಸ ವರ್ಷದ ಹೊಸ್ತಿಲಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ದೇಗುಲದಲ್ಲಿ ಬೆಳಗ್ಗೆಯಿಂದಲೇ ರಾಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮೂಲ ಬೃಂದಾವನದ ದರ್ಶನಕ್ಕಾಗಿ ಭಕ್ತ ಸಮೂಹವೇ ಆಗಮಿಸುತ್ತಿದೆ. ಬೆಳಗ್ಗೆ 4 ಗಂಟೆಯಿಂದ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.