ಮಂಡ್ಯ : ಮಾಜಿ ಸಚಿವ ಮತ್ತು ಮಂಡ್ಯ ಭಾಗದಲ್ಲಿ ಬಿಜೆಪಿಯ ಪ್ರಭಾವಿ ನಾಯಕ ಕೆಸಿ ನಾರಾಯಣಗೌಡ ಗೊಂದಲದಲ್ಲಿದ್ದಾರೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರುವ ವದಂತಿ ದಟ್ಟವಾಗಿ ಹರಡಿತ್ತು ಮತ್ತು ಸಿದ್ದರಾಮಯ್ಯ ಟಿಕೆಟ್ ನೀಡುವ ಭರವಸೆಯನ್ನೂ ನೀಡಿದ್ದರು, ಆದರೆ ಅವರು ಕಾಂಗ್ರೆಸ್ ಸೇರದೆ ಬಿಜೆಪಿಯಿಂದಲೇ ಸ್ಪರ್ಧಿಸಿ ಸೋತರು.
ನಂತರದ ಕೆಲ ತಿಂಗಳು ಕಾಣೆಯಾಗಿದ್ದ ಗೌಡರು ಲೋಕಸಭಾ ಚುನಾವಣೆ ಹತ್ತಿರ ಬಂದಿರುವ ಸಂದರ್ಭದಲ್ಲಿ ಮತ್ತೇ ಸಕ್ರಿಯರಾಗಿದ್ದಾರೆ. ಅವರ ಬಗ್ಗೆ ಲೇಟೆಸ್ಟ್ ಸುದ್ದಿ ಏನು ಗೊತ್ತಾ? ಕಾಂಗ್ರೆಸ್ ಸೇರುವ ಬಯಕೆ ಅವರು ಪುನಃ ವ್ಯಕ್ತಪಡಿಸಿದ್ದು ಅದಕ್ಕೆ ಪೂರ್ವಭಾವಿಯಾಗಿ ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಮೂಲಗಳ ಪ್ರಕಾರ ಅವರ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಬೇಡಿಕೆಯಿಟ್ಟಿದ್ದಾರೆ ಆದರೆ ಸಿದ್ದರಾಮಯ್ಯ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.
ಸ್ಥಾನಮಾನದ ಆಸೆಯಿದ್ದರೆ ಬರೋದು ಬೇಡ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರಂತೆ. ಜೆಡಿಎಸ್ ಮತ್ತು ಬಿಜೆಪಿ ನಡುವೆ ಏರ್ಪಟ್ಟಿರುವ ಮೈತ್ರಿ ಮೂಲತಃ ಜೆಡಿಎಸ್ ಪಕ್ಷದವರಾಗಿರುವ ಗೌಡರಲ್ಲಿ ಬೇಸರ ಮೂಡಿಸಿದೆ. ಅವರಿಗೆ ಈಗ ಜೆಡಿಎಸ್ ನಾಯಕನ್ನು ಕಂಡರಾಗುತ್ತಿಲ್ಲ. ಹಾಗಾಗೇ ಬದಲಾವಣೆಗಾಗಿ ಹುನ್ನಾರ.