ಹುಕ್ಕೇರಿ: ಮಕರ ಸಂಕ್ರಾಂತಿಯಂದು ಸಂಕೇಶ್ವರದಲ್ಲಿ ಮಕ್ಕಳಿಗಾಗಿ ಗಾಳಿಪಟ ತಯಾರಿಕೆ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಪವನ ಕಣಗಲಿ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿತ್ತು. ಶ್ರೀರಾಮ, ಸೀತೆ ಭಾವಚಿತ್ರವಿರುವ ಗಾಳಿಪಟ, ಹಳದಿ, ಕೆಂಪು ನಾಡ ಬಾವುಟ ಬಣ್ಣ, ಮೀನು, ಸೇರಿದಂತೆ ನಾನಾ ರೂಪ, ಆಕಾರದ ಗಾಳಿಪಟಗಳು ಗಾಳಿಯಲ್ಲಿ ತೇಲುತ್ತಿದ್ದವು.
ಅಂತರಾಷ್ಟ್ರೀಯ ಎಕ್ಸ್ಪರ್ಟ್ ಪ್ರಸನ್ನ ಮಿಶ್ರ ಕೋಟಿ ಮಾತನಾಡಿ ಸಂಕೇಶ್ವರದಂತ ಪ್ರದೇಶದಲ್ಲಿ ಪವನ ಕಣಗಲಿ ಫೌಂಡೇಶನ್ ವತಿಯಿಂದ ಮಕ್ಕಳಲ್ಲಿ ಗಾಳಿಪಟ ಹಾರಿಸುವ ಹವ್ಯಾಸವನ್ನು ಉತ್ತೇಜಿಸುವ ಸಲುವಾಗಿ ಸ್ಪರ್ಧೆ ಆಯೋಜಿಸಿರುವುದು ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ವಿಶೇಷವಾಗಿ ಹದ್ದು ಪಟ್ಟ ,ಸಾಲು ಪಟ್ಟಗಳು ಆಗಸದೆತ್ತರಕ್ಕೆ ಹಾರಿಸುವ ಮೂಲಕ ಪ್ರಸನ್ನ ಮಿಶ್ರ ಕೋಟಿ ಅವರು ಜನರ ಕಣ್ನೋಟ್ಟ ಸೆಳೆದರು.
ಆಯೋಜಕರಾದ ಪವಣ ಕಣಗಲಿ ಮಾತನಾಡಿ 5ನೇ ವರ್ಷದ ಗಾಳಿ ಪಟ ಸ್ಪರ್ಧೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬರುವ ದಿನಗಳಲ್ಲಿ ಜಿಲ್ಲೆಯ ಮಟ್ಟದಲ್ಲಿ ಗಾಳಿ ಪಟ ಸ್ಪರ್ಧೆ ಆಯೋಜಿಸಲಾಗುವುದು. ಸ್ಪರ್ಧೆಯಲ್ಲಿ
142 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ (ಆರ್ಯನ ವಡ್ಡರ (ಪ್ರಥಮ), ಸೀಮಾ ಮರಡಿ (ದ್ವಿತೀಯ), ಅಬ್ದುಲ್ ಬಿಜಾಪೂರೆ (ತೃತೀಯ) ) ಗೆದ್ದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಗಾಳಿಪಟ ತಯಾರಿಸುವ ಸ್ಪರ್ಧೆಯಲ್ಲಿ ಸಂಗೀತಾ ಗರಬುಡೆ (ಪ್ರಥಮ), ಸೃಷ್ಟಿ ಹಿಡದುಗ್ಗಿ (ದ್ವಿತೀಯ), ಶ್ರೀನಿವಾಸ ಪೂಜಾರ (ತೃತೀಯ) ಸ್ಥಾನ ಪಡೆದಿದ್ದಾರೆ. ಎರಡೂ ಸ್ಪರ್ಧೆಯಲ್ಲಿ ಭಾಗವಹಿಸಿ ಐವರು ಸ್ಪರ್ಧಿಗಳು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ. ವಿವಿಧ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ಅನುಭವ ಪಡೆಕೊಂಡರು.