ಬೆಂಗಳೂರು: ಕೋರಮಂಗಲ ಕೆಫೆ ದುರುಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಾಲಿಕೆ ಎಚ್ಚೆತ್ತುಕೊಂಡಿದೆ.
ಈಗಾಗಲೇ ಪಬ್ , ಬಾರ್ , ರೆಸ್ಟೋರೆಂಟ್ ಪರಿಶೀಲನೆಗೆ ನೋಟಿಸ್ ವಿತರಣೆ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್. ಸೇರಿ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ನ್ಯೂನ್ಯತೆಗಳು ಕಂಡುಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಜೊತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದ್ದು,ಈ ಪೈಕಿ ಇ 232 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ.ಅದರಲ್ಲಿ 86 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ 12 ಉದ್ದಿಮೆಗಳನ್ನು ಮುಚ್ಚಲಾಗಿರುತ್ತದೆ.ಕ್ರಮ ಸಂಖ್ಯೆ, ವಲಯ, ಪರವಾನಿಗೆ ನೀಡಿರುವ ಸಂಖ್ಯೆ, ತಪಾಸಣೆ ನಡೆಸಿರುವ ಸಂಖ್ಯೆ, ನೋಟಿಸ್ ನೀಡಿರುವ ಸಂಖ್ಯೆ, ಮುಚ್ಚಿರುವ ಸಂಖ್ಯೆಯ ವಿವರ:
- ದಕ್ಷಿಣ – 248 – 30 – 10 – 0
- ಪಶ್ಚಿಮ – 167 – 78 – 20 – 0
- ಪೂರ್ವ – 222 – 25 – 18 – 07
- ರಾಜರಾಜೇಶ್ವರಿನಗರ – 75 – 08 – 06 – 0
- ದಾಸರಹಳ್ಳಿ – 34 – 29 – 08 – 0
- ಯಲಹಂಕ – 110 – 18 – 0 – 0
- ಮಹದೇವಪುರ – 161 – 36 – 16 – 03
- ಬೊಮ್ಮನಹಳ್ಳಿ – 101 – 08 – 08 – 02
ಒಟ್ಟು: 1118 – 232 – 86 – 12