ಬೆಳಗಾವಿ ಮಹಾನಗರಪಾಲಿಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧವಾಗಿ ಬಿಜೆಪಿಯ ಸದಸ್ಯೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಮೇಯರ್ (Belagavi Mayor) ಆಗಿ ಬಿಜೆಪಿಯ ಶೋಭಾ ಸೋಮನಾಚೆ (Shobha Somanache) ಆಯ್ಕೆಯಾಗಿದ್ದರೆ, ಉಪ ಮೇಯರ್ Deputy Mayor ಆಗಿ ಬಿಜೆಪಿಯ ರೇಷ್ಮಾ ಪಾಟೀಲ್ ಆಯ್ಕೆಯಾಗಿದ್ದಾರೆ.
ಬೆಳಗಾವಿ ಮಹಾನಗರಪಾಲಿಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧವಾಗಿ ಬಿಜೆಪಿಯ ಸದಸ್ಯೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ.
ನೂತನ ಮಹಾಪೌರರಾದ ಶ್ರೀಮತಿ ಶೋಭಾ ಪಾಯಪ್ಪಾ ಸೋಮನಾಚೆ ಮತ್ತು ಉಪಮಹಾಪೌರರಾದ ಶ್ರೀಮತಿ ರೇಷ್ಮಾ ಪ್ರವೀಣ್ ಪಾಟೀಲ್ ಅವರಿಗೆ ಅಭಿನಂದನೆಗಳು. #BJPYeBharavase pic.twitter.com/COQHPc0lBH
— BJP Karnataka (@BJP4Karnataka) February 6, 2023
ಶೋಭಾ ಸೋಮನಾಚೆ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿಯ ರೇಷ್ಮಾ ಪಾಟೀಲ್ (Reshma patil) ಪರ 42 ಮತಗಳು ಚಲಾವಣೆಯಾಗಿದ್ದರೆ, ವೈಶಾಲಿಗೆ ಕೇವಲ 4 ಮತ, ಎಂಇಎಸ್ ಸದಸ್ಯೆ ವೈಶಾಲಿ ಭಾತಕಾಂಡೆಗೆ ಕೇವಲ 4 ಮತಗಳು ಸಿಕ್ಕಿವೆ.
ಮಹಾನಗರ ಪಾಲಿಕೆ ಮೇಯರ್ ಆಗಿರುವ ಶೋಭಾ ಸೋಮನಾಚೆ ಅವರು 57ನೇ ವಾರ್ಡ್ ನ ಬಿಜೆಪಿ ಸದಸ್ಯೆಯಾಗಿದ್ದರೆ, ಉಪ ಮೇಯರ್ ಆಗಿರುವ ರೇಷ್ಮಾ ಮಾಟೀಲ 33ನೇ ವಾರ್ಡ್ನ ಬಿಜೆಪಿ ಸದಸ್ಯೆಯಾಗಿದ್ದಾರೆ. ಆದ್ರೆ, ಈ ಇಬ್ಬರು ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ : – ಬೆಂಗಳೂರಿನ ಗಾಂಧಿನಗರದಲ್ಲಿ ಬಿಜೆಪಿ ನಾಯಕ ಬಿ.ಎಸ್ ಸೋಮಶೇಖರ್ ಶ್ರೀನಿವಾಸ್ ಕಲ್ಯಾಣೋತ್ಸವ
ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಅಭಯ್ ಪಾಟೀಲ್ ಪ್ರತಿಕ್ರಿಯಿಸಿದ್ದು, ಭಾಷೆವಾರು ಚುನಾವಣೆಗಿಂತ ಅಭಿವೃದ್ಧಿಪರ ಚಿಂತನೆಗೆ ಒತ್ತು ಕೊಟ್ಟಿದ್ದೇವೆ ಎಂದರು. ಇದರೊಂದಿಗೆ ಕನ್ನಡಿಗರನ್ನು ಕಡೆಗಣಿಸಿ ಮರಾಠಿ ಭಾಷಿಕರಿಗೆ ಮಣೆ ಹಾಕಿದ್ದಕ್ಕೆ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : – ನಾನು ಬ್ರಾಹ್ಮಣ ಸಮುದಾಯಕ್ಕೆ ಅಗೌರವ ತೋರಿಲ್ಲ – ಕುಮಾರಸ್ವಾಮಿ